48 ಗಂಟೆಗಳ ಧರಣಿ ಆರಂಭಿಸಿದ ಟಿಎಂಸಿ, ನಾಟಕ ಎಂದ ಬಿಜೆಪಿ

ಕೋಲ್ಕತ್ತಾ, ಮಾರ್ಚ್ 15: ಪಶ್ಚಿಮ ಬಂಗಾಳದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಿರುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಮಾ.15 ರ ಸಂಜೆಯಿಂದ 48 ಗಂಟೆಗಳ ಧರಣಿ ನಡೆಸಲು ಮುಂದಾಗಿದೆ.

ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಬಿಜೆಪಿ ಆಟವಾಡುತ್ತಿದೆ. ಪಶ್ಚಿಮಬಂಗಾಳದಲ್ಲಿ ಠೇವಣಿಯೇ ಇಲ್ಲದಿದ್ದರು ಬಿಜೆಪಿ ಇಲ್ಲಿನ ಆಡಳಿತದಲ್ಲಿ ತಲೆ ಹಾಕುತ್ತಿದೆ. ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಎಂದು ಘೋಷಿಸುವ ಮೂಲಕ ದೇಶದ ಜನರಲ್ಲಿ ಪಶ್ಚಿಮ ಬಂಗಾಳದ ಬಗ್ಗೆ ಕೆಟ್ಟ ಭಾವನೆ ಸೃಷ್ಟಿಯಾಗುವಂತೆ ಮಾಡುತ್ತಿದೆ ಎಂದು ಟಿಎಂಸಿ ನಾಯಕರು ದೂರಿದ್ದಾರೆ.

"ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇಲ್ಲಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಆದರೆ ಬಿಜೆಪಿ ಈ ರಾಜ್ಯದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಎಂದು ಘೋಷಿಸುವಂತೆ ತಾನೇ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಈ ಮೂಲಕ ಕೇಂದ್ರ ಭದ್ರತಾ ಪಡೆಗಳನ್ನು ಬಳಸಿಕೊಂಡು ಚುನಾವನೆ ಗೆಲ್ಲುವ ಹುನ್ನಾರ ನಡೆಸುತ್ತಿದೆ" ಎಂದು ಟಿಎಂಸಿ ಆರೋಪಿಸಿದೆ.

TMC starts 48 hour dharna, BJP calls it a Drama

"ನಾವು ಪಶ್ಚಿಮ ಬಂಗಾಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಚುನಾವನೆ ನಡೆಸುವ ಉದ್ದೇಶದಿಂದ ಎಲ್ಲಾ ಮತಗಟ್ಟೆಗಳನ್ನೂ ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಘೋಷಿಸಿದ್ದೇವೆ. ಪಂಚಾಯತ್ ಮಟ್ಟದ ಚುನಾವಣೆಯಲ್ಲೇ ಪಶ್ಚಿಮ ಬಂಗಾಳದಲ್ಲಿ ನಾಲ್ಕಾರು ಸಾವಿನ ಘಟನೆಗಳು ನಡೆದಿಲ್ಲವೇ? ನಮಗೆ ಶಾಂತಿಯುತ ಚುನಾವಣೆ ಮುಖ್ಯ. ಟಿಎಂಸಿಯ ಧರಣೆ ಒಂದು ಕಪಟ ನಾಟಕ" ಎಂದು ಬಿಜೆಪಿ ಸಮಜಾಯಿಷಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+