ಸೌಮಿತ್ರಾ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಟಿಎಂಸಿ ಸಂಸದ ಅಮಾನತು!
ಕೋಲ್ಕತಾ, ಜನವರಿ 09: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅನುಪಮ್ ಹಜ್ರಾ ಅವರನ್ನು ಬುಧವಾರದಂದು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪವನ್ನು ಅನುಪಮ್ ಅವರ ಮೇಲೆ ಹೊರೆಸಲಾಗಿದೆ. ಪಕ್ಷದ ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಂಡಿದ್ದರಿಂದ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದರು.
ಅನುಪಮ್ ಅವರು ಪಶ್ಚಿಮ ಬೆಂಗಾಲದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. 2014ರಲ್ಲಿ ಬೋಲುಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಈ ಬೆಳವಣಿಗೆಗೂ ಮುನ್ನ ಇಂದು ಬೆಳಗ್ಗೆ ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಸೌಮಿತ್ರಾ ಖಾನ್ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
2021ಕ್ಕೂ ಮುನ್ನ ಟಿಎಂಸಿ ಸಂಪೂರ್ಣವಾಗಿ ನಿರ್ನಾಮವಾಗಲಿದೆ, ಸೌಮಿತ್ರಾ ಖಾನ್ ಸೇರ್ಪಡೆ ಬರೀ ಟ್ರೈಲರ್ ಅಷ್ಟೇ ಎಂದು ಮುಕುಲ್ ರಾಯ್ ಹೇಳಿದರು.
ಮಮತಾ ಬ್ಯಾನರ್ಜಿ ಹಿಟ್ಲರ್ ನಂತೆ ವರ್ತಿಸುತ್ತಿದ್ದು, ಇನ್ನಷ್ಟು ಸಂಸದರು ಬಿಜೆಪಿ ಸೇರಲಿದ್ದಾರೆ ಎಂದು ರಾಯ್ ಹೇಳಿದ್ದರು. ಮೂಲಗಳ ಪ್ರಕಾರ ಹಜ್ರಾ ಅವರು ಕೂಡಾ ಬಿಜೆಪಿ ಸೇರಲು ಮುಂದಾಗಿದ್ದಾರೆ.












Click it and Unblock the Notifications