• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನ್‌ಲೈನ್‌ ಕ್ಲಾಸ್‌ಗೆ ಮೊಬೈಲ್‌ ಇಲ್ಲ: ಕೊಲ್ಕತ್ತಾದ ವಿದ್ಯಾರ್ಥಿನಿ ಆತ್ಮಹತ್ಯೆ

|

ಕೊಲ್ಕತ್ತಾ, ಜೂನ್ 20: ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕೊಲ್ಕತ್ತಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೇರಳದಲ್ಲಿ ಇದೇ ರೀತಿ ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಕೇರಳದಲ್ಲಿ ಆನ್‌ಲೈನ್‌ ಕ್ಲಾಸ್‌ ವಿಚಾರಕ್ಕೆ ನಡೆದ ಎರಡನೇ ಆತ್ಮಹತ್ಯೆಯಾಗಿತ್ತು. ಈ ಘಟನೆಗಳ ನಂತರ ಕೊಲ್ಕತ್ತಾದಲ್ಲಿ ಇಂತಹ ಘಟನೆಗೆ ಸಂಬವಿಸಿದೆ.

ಕೊಲ್ಕತ್ತಾ ಶಬಿನಿ ಕುಮಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿನಿ ಅಪ್ಪ, ಅಮ್ಮ ಹಾಗೂ ಹಿರಿಯ ಅಣ್ಣ ಊರಿಗೆ ಹೋಗಿದ್ದರು. ಮನೆಯಲ್ಲಿ ಶಬಿನಿ ಹಾಗೂ ಮತ್ತೊಬ್ಬ ಅಣ್ಣ ಮಾತ್ರ ಇದ್ದರು. ಅಣ್ಣ ಹೊರಗೆ ಆಟ ಆಡಲು ಹೋದ ಸಮಯದಲ್ಲಿ ಶಬಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ಬಗ್ಗೆ ಶಬಿನಿ ತಂದೆ ಮಾಹಿತಿ ನೀಡಿದ್ದಾರೆ.

ಶಬಿನಿ ಇಂಗ್ಲೀಷ್ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಲಾಕ್‌ಡೌನ್ ಸಮಯದಲ್ಲಿ ಆನ್‌ ಲೈನ್‌ ತರಗತಿ ನಡೆಯುತ್ತಿತ್ತು. ತನ್ನ ಬಳಿ ಇದ್ದ ಫೋನ್‌ ಒಡೆದುಕೊಂಡಿದ್ದ ಶಬಿನಿ, ಅಂಗಡಿಗಳು ಓಪನ್ ಇಲ್ಲದ ಕಾರಣ, ಅದನ್ನು ರಿಪೋರಿ ಮಾಡಿಸಿಕೊಳ್ಳಲು ಆಗಿರಲಿಲ್ಲ.

ಆನ್‌ಲೈನ್‌ ಕ್ಲಾಸ್‌ ಇಲ್ಲದಿದ್ದರೆ ನಾನು ಪರೀಕ್ಷೆಯಲ್ಲಿ ಫೇಲ್‌ ಆಗುತ್ತೇನೆ ಎನ್ನುವ ಭಯದಲ್ಲಿ, ಖಿನ್ನತೆಗೆ ಒಳಗಾದ ಶಬಿನಿ ಅದೆ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತನಿಖೆ ಪ್ರಾರಂಭ ಮಾಡಿದ್ದಾರೆ.

English summary
SSLC student in kolkata commits suicide after failing to attend online classes because of not having smartphone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X