ಟಿಎಂಸಿ ರಾಜ್ಯಸಭಾ ಸದಸ್ಯ ದಿನೇಶ್ ತ್ರಿವೇದಿ ರಾಜೀನಾಮೆ ಅಂಗೀಕಾರ
ಕೋಲ್ಕತ್ತಾ, ಫೆಬ್ರವರಿ.15: ರಾಜ್ಯಸಭೆಯ ಸದಸ್ಯ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ದಿನೇಶ್ ತ್ರಿವೇದಿ ಸಲ್ಲಿಸಿದ ರಾಜೀನಾಮೆಯನ್ನು ಸಭಾಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಅಂಗೀಕರಿಸಿದ್ದಾರೆ.
ಕಳೆದ ಫೆಬ್ರವರಿ.12ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಟಿಎಂಸಿ ಮೇಲ್ಮನೆ ಸದಸ್ಯ ದಿನೇಶ್ ತ್ರಿವೇದಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದರೆ ಅದರ ಬಗ್ಗೆ ನಾವಿಲ್ಲಿ ಕುಣಿತು ಏನನ್ನೂ ಮಾತನಾಡದ ಸ್ಥಿತಿಯಲ್ಲಿದ್ದೇವೆ. ನಮ್ಮ ರಾಜ್ಯದಲ್ಲಿ ಇಂದು ಹಿಂಸಾಚಾ ನಡೆಯುತ್ತಿದೆ. ಅದರ ಬಗ್ಗೆ ನಾವಿಲ್ಲ ಮಾತನಾಡದಂತೆ ಆಗಿದೆ. ಈ ಕಾರಣಕ್ಕಾಗಿಯೇ ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯಸಭೆಯಲ್ಲಿ ದಿನೇಶ್ ತ್ರಿವೇದಿ ಹೇಳಿದ್ದರು.
"ರಾಜ್ಯಸಭೆಗೆ ನನ್ನನ್ನು ಕಳುಹಿಸಿ ಕೊಟ್ಟ ಟಿಎಂಸಿ ಪಕ್ಷಕ್ಕೆ ನಾವು ಆಭಾರಿಯಾಗಿದ್ದೇನೆ. ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ನಾನೇನೂ ಮಾಡದ ಸ್ಥಿತಿಯಲ್ಲಿರುವುದು ಸಾಕಷ್ಟು ನೋವು ಉಂಟು ಮಾಡಿದೆ. ಈ ಸ್ಥಾನದಲ್ಲಿ ಇದ್ದರೂ ನಿನ್ನಿಂದ ಏನನ್ನೂ ಮಾಡಲಾಗದಿದ್ದರೆ, ನೀನೇಕೆ ರಾಜೀನಾಮೆ ಸಲ್ಲಿಸಬಾರದು ಎಂದು ನನ್ನ ಮನಸ್ಸು ಹೇಳುತ್ತಿದೆ. ಹಾಗಾಗಿ ನಾನು ಪಶ್ಚಿಮ ಬಂಗಾಳದ ಜನರೊಂದಿಗೆ ಸೇರಿ ಕೆಲಸ ಮಾಡುವುದಕ್ಕಾಗಿ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಸಂಸದ ದಿನೇಶ್ ತ್ರಿವೇದಿ ಹೇಳಿದ್ದರು.

ದಿನೇಶ್ ತ್ರಿವೇದಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಆಹ್ವಾನ:
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಟಿಎಂಸಿಯ ಹಲವು ನಾಯಕರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಇತ್ತೀಚಿಗೆ ರಾಜೀನಾಮೆ ಸಲ್ಲಿಸಿದ ದಿನೇಶ್ ತ್ರಿವೇದಿ ಕೂಡಾ ಬಿಜೆಪಿಗೆ ಬೆಂಬಲ ನೀಡುವ ರೀತಿಯಲ್ಲಿ ಟ್ವೀಟ್ ಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ, ಸಂಸದ ದಿನೇಶ್ ತ್ರಿವೇದಿಯಷ್ಟೇ ಅಲ್ಲ, ಪ್ರಾಮಾಣಿಕರಾಗಿ ಇರುವ ಯಾರೊಬ್ಬರೂ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೆ ಇಚ್ಛಿಸುವುದಿಲ್ಲ. ಒಂದು ವೇಳೆ ಅವರು ಬಿಜೆಪಿಗೆ ಸೇರುವುದಾದರೆ ಧಾರಾಳವಾಗಿ ಬರಬಹುದು ಎಂದು ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಆಹ್ವಾನ ನೀಡಿದ್ದರು.












Click it and Unblock the Notifications