'ಗೋವಾ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದು ಬಿಜೆಪಿಯ ಹಿನ್ನಡೆ!'
ಕೋಲ್ಕತ್ತಾ, ಅಕ್ಟೋಬರ್ 18: 'ಗೋವಾದಲ್ಲಿ ಇತ್ತೀಚೆಗೆ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದು ಕಾಂಗ್ರೆಸ್ ನ ಹಿನ್ನಡೆಯಲ್ಲ, ಬದಲಾಗಿ ಅದು ಬಿಜೆಪಿಯ ಹಿನ್ನಡೆ' ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
ಕೋಲ್ಕತ್ತಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಖುರ್ಷಿದ್, 'ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದನ್ನು ನೀವು ನಮ್ಮ ಹಿನ್ನಡೆ ಎಂದು ಕರೆಯಬಹುದು. ಆದರೆ ಅದು ನಮ್ಮ ಹಿನ್ನಡೆಯಲ್ಲ. ಬಿಜೆಪಿಯು ರಾಜಕೀಯಕ್ಕಾಗಿ ತನ್ನ ಸಿದ್ಧಾಂತಗಳನ್ನೆಲ್ಲ ಮರೆಯುತ್ತಿರುವುದಕ್ಕೆ ಇದು ಸಾಕ್ಷಿ. ತಾವು ಅಧಿಕಾರಕ್ಕೆ ಬರುವವರೆಗೆ ಈ ದೇಶದಲ್ಲಿ ಯಾವುದೂ ಸರಿಯಿರಲಿಲ್ಲ ಎನ್ನುತ್ತದ್ದ ಬಿಜೆಪಿಯವರು ಈಗ ಮಾಡುತ್ತಿರುವುದೇನು? ಅವರ ನಡೆ ಪ್ರಶ್ನಾರ್ಹವಲ್ಲವೇ?' ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನ ದಯಾನಂದ್ ಸಾಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಎಂಬ ಇಬ್ಬರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು.

ಗೋವಾದ ಮಾಜಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಸಾಪ್ಟೆ ಅವರನ್ನು ಇಲ್ಲಿನ ಮಂಡ್ರೆಮ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ಖುರ್ಷಿದ್ ದಾಖಲೆ ಬರೆದಿದ್ದರು.
ಶಿರೋಡಾ ವಿಧಾನಸಭಾ ಕ್ಷೇತ್ರದ ಶಾಸಕ ಸುಭಾಶಸ್ ಶಿರೋಡ್ಕರ್ ಅವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಸಿಗೆ ಶಾಕ್ ಕೊಟ್ಟಿದ್ದರು.












Click it and Unblock the Notifications