• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

24 ಗಂಟೆಗಳಲ್ಲೇ ಪ್ರಧಾನಿ ಮೋದಿ ಫೋಟೋಗೆ 10 ಲಕ್ಷ ಲೈಕ್ಸ್!

|

ಕೋಲ್ಕತ್ತಾ, ಜನವರಿ.24: ಪಶ್ಚಿಮ ಬಂಗಾಳದ ಭೇಟಿ ಸಂದರ್ಭದಲ್ಲಿ ಕ್ಲಿಕ್ಕಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋಗೆ 24 ಗಂಟೆಗಳಲ್ಲೇ 10 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ 125ನೇ ಜನ್ಮದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದ್ದರು.

ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ

ಕೋಲ್ಕತ್ತಾ ಭೇಟಿ ನೀಡಿದ ವೇಳೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಲೈಕ್ ಮಾಡಿದ್ದರೆ, 14,000 ಮಂದಿ ಶೇರ್ ಮಾಡಿದ್ದು, 47,000 ಜನ ಕಾಮೆಂಟ್ ಮಾಡಿರುವುದು ಸುದ್ದಿಯಾಗಿದೆ.

ನೇತಾಜಿ ಸಾಧನೆಯನ್ನು ಸ್ಮರಿಸಿದ ಪ್ರಧಾನಿ ಮೋದಿ:

'ಎರಡನೇ ವಿಶ್ವಯುದ್ಧ ಮತ್ತು ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ನಡುವೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಏಕೆ ಪ್ರತಿ ದೇಶಗಳಿಗೆ ತೆರಳಿ ಸಹಾಯ ಕೋರಿದರು? ಅದು ನಮ್ಮ ಸ್ವಾತಂತ್ರ್ಯಕ್ಕಾಗಿ! ಭಾರತದ ವಿಮೋಚನೆಗಾಗಿ! ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಋಣಿಯಾಗಿರಬೇಕು' ಎಂದು ಮೋದಿ ಹೇಳಿದರು. 'ಜಗತ್ತು ಎಲ್‌ಎಸಿಯಿಂದ ಎಲ್‌ಒಸಿವರೆಗಿನ ಭಾರತದ ಅವತಾರವನ್ನು ನೋಡುತ್ತಿದೆ. ಇಂದಿನ ಭಾರತವನ್ನು ಕಂಡು ನೇತಾಜಿ ಅವರು ಹೆಮ್ಮೆ ಪಡುತ್ತಾರೆ' ಎಂದು ತಿಳಿಸಿದರು.

English summary
More Than 10 Lakh Likes In Just 24 Hours For PM Modi's Picture At Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X