ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಸುಲಿಗೆಕೋರ ಪಕ್ಷ ಎಂದು ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 20: ಜಗತ್ತಿನಲ್ಲಿಯೇ ಬಿಜೆಪಿ ದೊಡ್ಡ ಸುಲಗೆಕೋರ ಪಕ್ಷವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಖೆಜುರಿಯಲ್ಲಿ ಶನಿವಾರ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯನೊಬ್ಬ ಸುಮಾರು 500 ರೂ. ಕದ್ದರೂ ಸಾಕು ಆತನನ್ನು ಸುಲುಗೆಕೋರ ಎಂದು ಕರೆಯುತ್ತಾರೆ, ಆದರೆ ಬಿಜೆಪಿ ಜನಸಾಮಾನ್ಯರಿಂದ ಲಕ್ಷ ಕೋಟಿ ರೂಗಳನ್ನು ಕೊಳ್ಳೆ ಹೊಡೆದಿದೆ ಬಿಜೆಪಿಯನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಚುನಾವಣೆ ಆರಂಭವಾಗಲಿದ್ದು, ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ.

Mamata Banerjee Sharpens Attack On BJP, Calls It Tolabaazs Feudal Landlord

ಪಿಎಂ ಕೇರ್ ಫಂಡ್‌ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಆದರೆ ಜನರಿಗೆ ಸರಿಯಾಗಿ ಕೋವಿಡ್ ಲಸಿಕೆಗಳು ಸಿಗುವ ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿಲ್ಲ. ಕೊರೊನಾ ಸೋಂಕು ಮತ್ತೆ ದೇಶಾದ್ಯಂತ ಹರಡುತ್ತಿದೆ ಎಂದರು.

ಬಿಜೆಪಿಯು ಗಲಭೆಗಳನ್ನು ಆಯೋಜಿಸುವ, ಜನರನ್ನು ಕೊಲ್ಲುವ ಹಾಗೂ ದಲಿತ ಮಹಿಳೆಯರನ್ನು ಹಿಂಸಿಸುವ ಕಾರ್ಯದಲ್ಲಿ ತೊಡಗಿದೆ. ಬಂಗಾಳದ ಜನರಿಗೆ ಶಾಂತಿ ಬೇಕೆಂದರೆ, ರಾಜ್ಯವು ಗಲಭೆಗಳಿಂದ ಮುಕ್ತವಾಗಿ ಇರಬೇಕೆಂದರೆ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂದರು.

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಲು ಬಿಜೆಪಿಯಂತಹ ಪಕ್ಷಗಳಿಗೆ ಎಂದೂ ಅಧಿಕಾರ ನೀಡಬಾರದು ಎಂದು ಪುನರುಚ್ಚರಿಸಿದರು.

English summary
West Bengal chief minister Mamata Banerjee on Saturday accused the Bharatiya Janata Party (BJP) of being extortionist and termed it a party of feudal landlords.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X