
ಲೋಕಸಭೆ ಚುನಾವಣೆ : ಕೋಲ್ಕತಾದಿಂದ ಅಮಿತ್ ಶಾ ಕಣಕ್ಕೆ?
ಕೋಲ್ಕತಾ, ಅಕ್ಟೋಬರ್ 31: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷ ಅಮಿತ್ ಶಾ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲ್ಕತ್ತಾ ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲಿ ಬಿಜೆಪಿ ಚಿಂತಿಸುತ್ತಿದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿದೆ.
ಆನಂದ್ ಬಜಾರ್ ಪತ್ರಿಕಾದಲ್ಲಿನ ವರದಿಯಂತೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಕ್ಷೇತ್ರವಾಗಿ ಒಡಿಶಾ ರಾಜ್ಯದ ಒಂದು ರಾಜ್ಯವನ್ನು ಆಯ್ಕೆ ಮಾಡಬಹುದಾಗಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೋಲ್ಕತಾದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಮೋದಿ ಅವರು ದಕ್ಷಿಣ ಭಾರತದ ಈ ಕ್ಷೇತ್ರದಿಂದ ಸ್ಪರ್ಧಿಸುವರೇ?
ಪಶ್ಚಿಮ ಬಂಗಾಲ ಹಾಗೂ ಒಡಿಶಾದಲ್ಲಿ ಒಟ್ಟು 63 ಸಂಸತ್ ಸ್ಥಾನಗಳಿವೆ. 2014ರಲ್ಲಿ ಬೆಂಗಾಲದಲ್ಲಿ 42 ಕ್ಷೇತ್ರಗಳ ಪೈಕಿ 2 ಸ್ಥಾನ ಮಾತ್ರ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿತ್ತು. ಒಡಿಶಾದಲ್ಲಿ 21 ಸ್ಥಾನಗಳ ಪೈಕಿ 1 ಕ್ಷೇತ್ರದಲ್ಲಿ ಮಾತ್ರ ಜಯಿಸಿತ್ತು.
ಬಿಜೆಪಿಯ ನಂ.1 ಹಾಗೂ ನಂ.2 ನಾಯಕರು ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಎದುರಾಳಿಗಳಿಗೆ ಅಚ್ಚರಿ, ಆಘಾತ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.
ಕರ್ನಾಟಕದಿಂದ ಲೋಕಸಭೆಗೆ ಮೋದಿ ಸ್ಪರ್ಧೆ: ಬಿಎಸ್ವೈ ಪ್ರತಿಕ್ರಿಯೆ ಏನು?
ಮೋದಿ ಅವರು ಒಡಿಶಾದ ಧಾರ್ಮಿಕ ತಾಣ ಪುರಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ವಾರಣಾಸಿ ಕ್ಷೇತ್ರದ ಹಾಲಿ ಸಂಸದರಾಗಿರುವ ಮೋದಿ ಅವರು ಕರಾವಳಿ ತೀರದ ನಗರಿ ಪುರಿಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಕ್ಷೇತ್ರ ಬದಲಾವಣೆಯತ್ತ ಪ್ರಧಾನಿ ಮೋದಿ ಚಿತ್ತ: ಏನಿದು ರಾಜಕೀಯ ಒಳಮರ್ಮ?
ಅಮಿತ್ ಶಾ ಅವರು ಕೋಲ್ಕತಾ ಉತ್ತರ ಕ್ಷೇತ್ರವಲ್ಲದೆ, ಅಸಾನೋಲ್ ಕ್ಷೇತ್ರವನ್ನು ಪರಿಗಣಿಸುತ್ತಿದ್ದಾರೆ. 2014ರಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರ ಹಾಕಿತ್ತು. ಶೇ 37ರಷ್ಟು ಮತಪಾಲು ಗಳಿಸಿ ಜಯ ದಾಖಲಿಸಿತ್ತು. ಟಿಎಂಸಿ ಮತ ಪಾಲು ಶೇ30.6ಕ್ಕೆ ಕುಸಿಯಿತು. ಸಿಪಿಐಎಂ ಶೇ22ರಷ್ಟು ಮತಪಾಲು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿತ್ತು.