Breaking: ಮಮತಾ ಬ್ಯಾನರ್ಜಿ ಆಪ್ತ ಕೌಸ್ತವ್ ರೇ ಮೇಲೆ ಐಟಿ, ಇಡಿ ದಾಳಿ
ಕೋಲ್ಕತ್ತಾ, ಆಗಸ್ಟ್ 16: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದ ದಾಳಿಗಳು ಮುಂದುವರೆದಿವೆ. ಮಂಗಳವಾರ ಕೋಲ್ಕತ್ತಾ ಟಿವಿಯ ಸಿಇಒ ಕೌಸ್ತವ್ ರೇ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಜಾರಿ ನಿರ್ದೇಶನಾಲಯ ಮತ್ತು ಆದಾಯ ಇಲಾಖೆ ಜಂಟಿಯಾಗಿ ದಾಳಿ ನಡೆಸಿದೆ. ಕೌಸ್ತವ್ ರೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸ್ನೇಹಿತರು.
ಈ ಹಿಂದೆಯೂ ಬ್ಯಾಂಕ್‌ಗೆ ಸಾಲ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಇಂದು ಯಾವ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂಬುದು ಇನ್ನು ತಿಳಿದಿಲ್ಲ.

ಆದರೆ, ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯವು ಮಮತಾ ಬ್ಯಾನರ್ಜಿ ಅವರ ಆಪ್ತರ ಮೇಲೆ ದಾಳಿ ನಡೆಸುತ್ತಲೆ ಇದೆ. ಈ ಹಿಂದೆ ಸಚಿವರಾಗಿದ್ದ ಪಾರ್ಥ ಚರ್ಟರ್ಜಿ ಅವರನ್ನು ಬಂಧಿಸಿದೆ.
Recommended Video
BJP ಅವರದ್ದು ನಕಲಿ ದೇಶಭಕ್ತಿ, ಇವರಿಗೆ ಇತಿಹಾಸವೇ ಗೊತ್ತಿಲ್ಲ: ಬಿಜೆಪಿ ಮೇಲೆ ಸಿದ್ದು ಗರಂ | *Karnataka | Oneindia
ಇದಾದ ಬಳಿಕ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಹಾಗೂ ಟಿಎಂಸಿಯ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ 2020 ರ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದೆ.












Click it and Unblock the Notifications