ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಮುಟ್ಟಬೇಡಿ, ನಾನು ಪುರುಷ ಎಂದ ಬಿಜೆಪಿ ಶಾಸಕ; ವಿಡಿಯೋ ನೋಡಿ

|
Google Oneindia Kannada News

ಕೋಲ್ಕತ್ತಾ, ಸೆ.13: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ.

ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲದ ವಿರುದ್ಧ ಬಿಜೆಪಿ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಘರ್ಷಣೆಯಲ್ಲಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಕಾಲೆಳೆದಿದೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಮಹಿಳಾ ಪೊಲೀಸರಿಗೆ ತಾನು ಗಂಡಸು ತನ್ನನ್ನು ಮುಟ್ಟಬೇಡಿ ಎಂದು ನೀಡಿದ ಹೇಳಿಕೆಯ ವಿಡಿಯೋ ಹಂಚಿಕೊಂಡು ಸುವೇಂಧು ಅವರ ಮಾಜಿ ಪಕ್ಷವಾದ ತೃಣಮೂಲ ಟ್ರೋಲ್ ಮಾಡುತ್ತಿದೆ.

Dont touch my body. I am male says Bengal BJP leader

ಪ್ರತಿಭಟನೆ ನಡೆಸುತ್ತಿದ್ದ ಸುವೇಂದು ಅಧಿಕಾರಿ ಅವರನ್ನು ಜೈಲು ವ್ಯಾನ್‌ಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದ ಮಹಿಳಾ ಪೋಲೀಸರನ್ನು ಉದ್ದೇಶಿಸಿ "ನನ್ನ ದೇಹವನ್ನು ಮುಟ್ಟಬೇಡಿ. ನೀವು ಮಹಿಳೆ, ನಾನು ಪುರುಷ" ಎಂದು ಬಂಗಾಳದ ವಿರೋಧ ಪಕ್ಷದ ನಾಯಕ ಕೂಗುತ್ತಿರುವುದು ಕೇಳಿಬಂದಿದೆ. ಈ ವಿಡಿಯೋವನ್ನು

ತೃಣಮೂಲ ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ವಿಡಿಯೋ ಹಂಚಿಕೊಂಡು, "ಬಿಜೆಪಿಯ 56-ಇಂಚಿನ ಎದೆಯ ಮಾದರಿ ಸ್ಫೋಟಗೊಂಡಿದೆ! ದಿನದ ಘೋಷಣೆ: "ನನ್ನ ದೇಹವನ್ನು ಮುಟ್ಟಬೇಡಿ. ನಾನು ಪುರುಷ!" ಎಂದು ವ್ಯಂಗ್ಯವಾಡಿದೆ.

ತಾನು "ಕಾನೂನು ಪಾಲಿಸುವ ನಾಗರಿಕ" ಎಂದು ಹೇಳಿರುವ ಸುವೇಂದು ಅಧಿಕಾರಿ ಪುರುಷ ಪೋಲೀಸ್‌ರನ್ನು ಕರೆದರು. ಅವರನ್ನು ಹಿರಿಯ ಅಧಿಕಾರಿ ಆಕಾಶ್ ಮಘರಿಯಾ ಪೊಲೀಸ್ ವ್ಯಾನ್‌ಗೆ ಕರೆದೊಯ್ಯದರು.

ಬಳಿಕ ಮಾತನಾಡಿದ ಅವರು, ಹೆಣ್ಣನ್ನು ಗೌರವಿಸುವ ಕಾರಣಕ್ಕೆ ಹಲ್ಲೆಗೊಳಗಾದರೂ ತಿರುಗೇಟು ನೀಡಲಿಲ್ಲ ಎಂದಿದ್ದಾರೆ.

Dont touch my body. I am male says Bengal BJP leader

ಬಂಧಿತರಾಗಿರುವ ಪಕ್ಷದ ಸಂಸದ ಲಾಕೆಟ್ ಚಟರ್ಜಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ "ನಾನು ಪ್ರತಿ ಮಹಿಳೆಯ ಕಣ್ಣಿನಲ್ಲಿಯೂ ದುರ್ಗಾ ಮಾತೆಯನ್ನು ನೋಡುತ್ತೇನೆ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ನಿಕಟ ಸಹಾಯಕರಾಗಿದ್ದ ಸುವೇಂದು ಅಧಿಕಾರಿ ಅವರು 2021 ರ ಬಂಗಾಳ ಚುನಾವಣೆಯ ಪೂರ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಮಮತಾ ಬ್ಯಾನರ್ಜಿ ಸರ್ಕಾರದ ಪ್ರಧಾನ ಕಛೇರಿಯಾದ 'ನಬನ್ನಾ'ಕ್ಕೆ ಮೆರವಣಿಗೆ ನಡೆಸುತ್ತಿದ್ದಾಗ ಹಲವಾರು ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು. ರಾಜ್ಯದ ಆಡಳಿತ ಪಕ್ಷ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಸುವೇಂದು ಅಧಿಕಾರಿ, ಲಾಕೆಟ್ ಚಟರ್ಜಿ ಮತ್ತು ಇತರ ಪಕ್ಷದ ಮುಖಂಡರನ್ನು ಕಟ್ಟಡಕ್ಕೆ ಹೋಗುವಾಗ ತಡೆದು ಜೈಲು ವ್ಯಾನ್‌ನಲ್ಲಿ ಕರೆದೊಯ್ಯಲಾಯಿತು.

ಹೌರಾ ಸೇತುವೆ ಬಳಿ ಪ್ರತಿಭಟನಾಕಾರರು ಭದ್ರತಾ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. ಪ್ರತಿಭಟನಾಕಾರರು ಪೊಲೀಸ್ ಕಾರಿಗೆ ಬೆಂಕಿ ಹಚ್ಚಿದ್ದಾರೆ.

ತೃಣಮೂಲ ಕಾಂಗ್ರೆಸ್ ಸುವೇಂದು ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಹಂಚಿಕೊಂಡಿದೆ.

"ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬೆದರಿಕೆ ಹಾಕುತ್ತಿದ್ದಾರೆ. ತಮ್ಮ ಕೆಲಸವನ್ನು ಮಾಡುತ್ತಿದ್ದ ಐಪಿಎಸ್ ಅಧಿಕಾರಿಗಳು ಮತ್ತು ಪಶ್ಚಿಮ ಬಂಗಾಳ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಇಡಿ ಮತ್ತು ಸಿಬಿಐ ಎಡರನ್ನು ಬೊಂಬೆಗಳನ್ನಾಗಿಸಿಕೊಂಡಿರುವ ಬಿಜೆಪಿ ಇನ್ನೇನು ಮಾಡುತ್ತದೆ..? ಬಿಜೆಪಿಯ ದುರಾಡಳಿತದಲ್ಲಿ ನಾವು ಈ ರಾಷ್ಟ್ರದಲ್ಲಿ ಯಾವುದೇ ನ್ಯಾಯವನ್ನು ನಿರೀಕ್ಷಿಸಬಹುದೇ..?" ಎಂದು ಪ್ರಶ್ನಿಸಿದೆ.

ಇನ್ನು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ವೇಳೆ ಪೊಲೀಸ್ ಕಾರುಗಳಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋಗಳನ್ನು ಟಿಎಂಸಿ ಹಂಚಿಕೊಂಡಿದೆ.

English summary
Don't touch my body. You are lady, I am male," says BJP leader Suvendu Adhikari in Kolkata protest, Trinamool trolled him. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X