ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 565 ಚಿಟ್ ಫಂಡ್ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ ಸಿಬಿಐ

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್ 28: ಕೋಲ್ಕತ್ತಾದಲ್ಲಿ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಜಿ ಉಪ ರಿಜಿಸ್ಟ್ರಾರ್ ಮತ್ತು ಇತರ ಮೂವರನ್ನು ಬಂಧಿಸಿರುವುದಾಗಿ ಕೇಂದ್ರೀಯ ತನಿಖಾ ತಂಡ(ಸಿಬಿಐ)ದ ಅಧಿಕಾರಿಗಳು ಬಂಧಿಸಿದ್ದಾರೆ.

ಖಾಸಗಿ ಕಂಪನಿಗಳ ಸಂಸ್ಥಾಪಕ ನಿರ್ದೇಶಕರು ಮತ್ತು ಇಬ್ಬರು ಪ್ರಾದೇಶಿಕ ವ್ಯವಸ್ಥಾಪಕರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿರುವುದಾಗಿ ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 2014ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಪಾಲನೆಯಲ್ಲಿ ಖಾಸಗಿ ಕಂಪನಿಯೊಂದರ ಅಂದಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರ ಜೊತೆಗೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ ಎಂದು ಸಂಸ್ಥೆ ಹೇಳಿದೆ.

'ಆನ್‌ಲೈನ್ ಚೈಲ್ಡ್ ಪ್ರೋನೋಗ್ರಫಿ': 20 ರಾಜ್ಯಗಳಲ್ಲಿ 56 ಸ್ಥಳಗಳ ಮೇಲೆ ಸಿಬಿಐ ದಾಳಿ'ಆನ್‌ಲೈನ್ ಚೈಲ್ಡ್ ಪ್ರೋನೋಗ್ರಫಿ': 20 ರಾಜ್ಯಗಳಲ್ಲಿ 56 ಸ್ಥಳಗಳ ಮೇಲೆ ಸಿಬಿಐ ದಾಳಿ

ಕೋಲ್ಕತ್ತಾದಲ್ಲಿ ಆಗಿನ ಕಂಪನಿಗಳ ಉಪ ರಿಜಿಸ್ಟ್ರಾರ್ ಆಗಿದ್ದ ಸುಭಾ ಕುಮಾರ್ ಬ್ಯಾನರ್ಜಿ, ಆಗ ಕಂಪನಿಯ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಶ್ರೀನಿವಾಸನ್ ಮತ್ತು ಇತರ ಇಬ್ಬರನ್ನು ಬಂಧಿಸಿರುವ ಬಗ್ಗೆ ಸಂಸ್ಥೆಯು ಮಾಹಿತಿ ನೀಡಿದೆ.

Chit Fund Case: CBI Arrested 4 accused in Kolkata

565 ಕೋಟಿ ರೂಪಾಯಿ ವಂಚನೆ ಕೇಸ್:

ಒಡಿಶಾದಲ್ಲಿ ಜನರಿಗೆ ಹೆಚ್ಚಿನ ಬಡ್ಡಿ ನೀಡುವ ಆಮಿಷಯೊಡ್ಡಿ 565 ಕೋಟಿ ರೂಪಾಯಿ ಮೊತ್ತದ ಠೇವಣಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಹೆಚ್ಚಿನ ಆದಾಯ ನೀಡುವ ಭರವಸೆ ನೀಡಿದ್ದರು. ಆದರೆ ಮೆಚ್ಯೂರಿಟಿ ಮೊತ್ತವನ್ನೂ ಸಹ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಸದ್ಯ ಬಂಧಿತ ನಾಲ್ವರು ಪೋಂಜಿ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದು, ಹಣದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಗಿನ ಕಂಪನಿಗಳ ಡೆಪ್ಯುಟಿ ರಿಜಿಸ್ಟ್ರಾರ್ ಇನ್ಫಿನಿಟಿ ರಿಯಲ್‌ಕಾನ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಪ್ರಣಬ್ ಮುಖರ್ಜಿಯ ಅಕ್ರಮ ಠೇವಣಿ ಸಂಗ್ರಹ ವ್ಯವಹಾರವನ್ನು ಸುಗಮಗೊಳಿಸಿದ್ದರು ಎಂದು ಸಿಬಿಐ ಹೇಳಿದೆ.

English summary
Central Burueau of Investigation team Arrested 4 accused in Kolkata in 565 crore Chit Fund Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X