• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಮಾದರಿಯಲ್ಲೇ ಬೆಂಗಾಳದಲ್ಲೂ ವಿಧಾನಸಭೆ ಚುನಾವಣೆ ಆಯೋಜನೆ

|

ಕೋಲ್ಕತಾ, ಫೆಬ್ರವರಿ 24: ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಪ್ರವಾಸ ಪೂರೈಸಿದ ಬಳಿಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಆಯೋಗದ ಅಧಿಕಾರಿಗಳು ನಿಗದಿಪಡಿಸುತ್ತಿದ್ದಾರೆ.

ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಬಿಹಾರ ಮಾದರಿಯಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಸುದ್ದಿ ಬಂದಿದೆ. ಕಳೆದ ವರ್ಷ ಕೊರೊನಾವೈರಸ್ ಸಂಕಷ್ಟದ ನಡುವೆ ಬಿಹಾರದಲ್ಲಿ ಚುನಾವಣೆ ಆಯೋಜಿಸಿದ್ದ ಆಯೋಗಕ್ಕೆ ಬೆಂಗಾಳದಲ್ಲಿ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊವಿಡ್ 19 ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಬಿಹಾರ ರಾಜ್ಯದಲ್ಲಿ ಅನುಸರಿಸಿದ ಕ್ರಮಗಳನ್ನು ಬೆಂಗಾಳದಲ್ಲೂ ಜಾರಿಗೊಳಿಸಲು ಸೂಚನೆ ಸಿಕ್ಕಿದೆ.

ಕೊವಿಡ್ 19 ಮಾರ್ಗಸೂಚಿಗಳು ಮತದಾರ, ಮತಗಟ್ಟೆ ಅಧಿಕಾರಿಗಳಲ್ಲದೆ, ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ. ಮತಗಟ್ಟೆ ಕೇಂದ್ರದಲ್ಲಿ ಅಧಿಕಾರಿಗಳು ಮಾಸ್ಕ್ ಧರಿಸುವುಸು, ಫೇಸ್ ಶೀಲ್ಡ್, ಕೈಗವಸು ಹಾಕಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.

ಮತದಾರರ ದೈಹಿಕ ತಾಪಮಾನ ಪರೀಕ್ಷೆ ಮಾಡಿದ ನಂತರವಷ್ಟೇ ಮತದಾನ ಕೇಂದ್ರದೊಳಗೆ ಪ್ರವೇಶಿಸಬಹುದಾಗಿದೆ.

ಎರಡು ಬಾರಿ ತಾಪಮಾನ ಪರೀಕ್ಷೆ ಮಾಡಿದ ಬಳಿಕ ಆ ವ್ಯಕ್ತಿಯ ದೈಹಿಕ ತಾಪಮಾನ 100.4 ಡಿಗ್ರಿ ಫ್ಯಾರೆನ್ ಹೀಟ್ ಮಿತಿ ದಾಟಿದರೆ, ಮತದಾನಕ್ಕೆ ಆ ಸಮಯಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಮತದಾನ ದಿನದ ಕೊನೆ ಅವಧಿಯಲ್ಲಿ ಸಂಜೆ 5 ರಿಂದ 6 ಗಂಟೆ ವೇಳೆಯಲ್ಲಿ ಪ್ರತ್ಯೇಕವಾಗಿ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಮತದಾರರಿಗೆ ಒಂದು ಬಾರಿ ಮಾತ್ರ ಬಳಸಬಹುದಾದ ಕೈಗವಸು ನೀಡಲಾಗುತ್ತದೆ. ಕೈಗವಸು ಹಾಕಿಕೊಂಡು ಸಹಿ ಹಾಗೂ ಮತ ಚಲಾವಣೆ ಮಾಡಬೇಕಾಗುತ್ತದೆ ಎಂದು ನಿಯಮಗಳ ಬಗ್ಗೆ ಸುಳಿವು ನೀಡಿದರು.

ಮೂಲಗಳ ಪ್ರಕಾರ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ 6 ರಿಂದ 8 ಹಾಗೂ ಅಸ್ಸಾಂನಲ್ಲಿ 2 ರಿಂದ 3 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ.

ಸಿಬಿಎಸ್ ಇ 10 ಹಾಗೂ 12ನೇ ತರಗತಿ ಪರೀಕ್ಷೆ ಮುನ್ನ ಮೇ 1ರೊಳಗೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿಸಲು ಆಯೋಗ ಸಿದ್ಧತೆ ನಡೆಸಿದೆ.ಏಪ್ರಿಲ್ ಅಂತ್ಯಕ್ಕೆ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಆಯೋಗ ಉದ್ದೇಶವಾಗಿದೆ.

English summary
The Election Commission of India (ECI) will follow the Bihar model, taken up last year for conducting the assembly polls amid the coronavirus pandemic, during the upcoming election in West Bengal, a senior official at the CEO office said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X