ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು

Recommended Video

      ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ | Oneindia Kannada

      ಕೋಲ್ಕತ್ತಾ, ಮೇ 28: ಲೋಕಸಭೆ ಚುನಾವಣೆಯಲ್ಲಿ ಆಘಾತಕಾರಿ ಪ್ರದರ್ಶನ ತೋರಿದ ನಂತರ ಮುಖಭಂಗ ಅನುಭವಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಭಾರೀ ಆಘಾತ ಎದುರಾಗಿದೆ.

      ಮೂವರು ಟಿಎಂಸಿ ಶಾಸಕರು ಬಿಜೆಪಿ ಸೇರುವುದಕ್ಕೆಂದು ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಸೋಮವಾರ ಸಂಜೆಯೇ ಈ ಶಾಸಕರು ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

      2017 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಅವರ ನೇತೃತ್ವದಲ್ಲಿ ಶಾಸಕರು ಬಿಜೆಪಿ ಸೇರಲಿದ್ದು, ಮೂವರೂ ಬಾರಾಕ್ಪೋರ್ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರಾಗಿದ್ದಾರೆ.

      vaBig shock to Mamata Banerjee, 3 TMC MLAs to join BJP

      ಟಿಎಂಸಿಯಿಂದ ಅಮಾನತುಗೊಂಡ ಸುಬ್ರಂಗ್ಶು ರಾಯ್(ಮುಕುಲ್ ರಾಯ್ ಪುತ್ರ), ದಿನೇಶ್ ತ್ರಿವೇದಿ, ಸುನಿಲ್ ಸಿಂಗ್ ಎಂಬ ಮೂವರು ಬಿಜೆಪಿ ಸೇರಲಿದ್ದು, ಲೋಕಸಭೆ ಚುನಾವಣೆಯ ಕಳಪೆ ಪ್ರದರ್ಶನದೊಂದಿಗೆ, ವಿಧಾನಸಭೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಉಭಯ ಸಂಕಟಕ್ಕೂ ಮಮತಾ ಬ್ಯಾನರ್ಜಿ ತುತ್ತಾಗುವ ಸಾಧ್ಯತೆ ಇದೆ.

      ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಪ್ರಕಟವಾಗಿದ್ದು, ಬಿಜೆಪಿ 18(42) ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+