ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಪಶ್ಚಿಮ ಬಂಗಾಳ ಕದನ: ಅಮಿತ್ ಕೊಟ್ಟ ಗುರಿ ಮುಟ್ಟಲಿದೆ ಬಿಜೆಪಿ''

|
Google Oneindia Kannada News

ಕೋಲ್ಕತಾ, ಜನವರಿ 11: ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಟಾರ್ಗೆಟ್ ನಿಗದಿಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಅವರು ಪಶ್ಚಿಮ ಬೆಂಗಾಳದಲ್ಲಿ ಬಿಜೆಪಿಗೆ 294ರಲ್ಲಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ಕೊಟ್ಟಿದ್ದಾರೆ. ಈ ಗುರಿಯನ್ನು ಬಿಜೆಪಿ ಮುಟ್ಟಲಿದ್ದು, ಅಭೂತಪೂರ್ವ ಜಯ ದಾಖಲಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದರು.

2021ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ಜೊತೆಗೆ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಮಮತಾ ಬ್ಯಾನರ್ಜಿ ನೇತೃತ್ವ ತೃಣಮೂಲ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಂಗ್ ಪಟೇಲ್ ಹೇಳಿದರು.

ಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲುಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲು

''ಮಮತಾ ಸರ್ಕಾರದ ದುರಾಡಳಿತ, ನಿರ್ಲಕ್ಷ್ಯ ಕೊನೆಗೊಳ್ಳಲಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯಲಿದೆ, ಜನತೆಯ ಬೆಂಬಲ ಬಿಜೆಪಿಗೆ ಸಿಗಲಿದೆ'' ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

Bengal elections 2021: BJP will win 200 seats says union minister Prahlad Singh Patel

ಡಾರ್ಜಲಿಂಗ್ ದೇಶದ ಅತ್ಯಂತ ಸುಂದರವಾದ ನೈಸರ್ಗಿಕ ತಾಣ ಆದರೆ, ಮಮತಾ ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೆ, ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಟೀ ಎಸ್ಟೇಟ್ ಗಳ ಕಾರ್ಮಿಕರ ಬವಣೆ ಕೇಳುವವರು ಇಲ್ಲದ್ದಂತಾಗಿದೆ, ದೇಶಿ ಕಲೆ, ಸಂಸ್ಕೃತಿ, ಪ್ರವಾಸಿ ತಾಣಗಳನ್ನು ಉಳಿಸಿ, ಬೆಳಸುವಲ್ಲಿ ಸರ್ಕಾರ ಸೋತಿದೆ ಎಂದು ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ 22 ಸ್ಥಾನ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದ ಅಮಿತ್ ಶಾ ಅವರು ಅಂತಿಮವಾಗಿ 18 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಶೇ 40.5 ಮತ ಗಳಿಕೆ ಮೂಲಕ ಬಿಜೆಪಿಗೆ ಬೆಂಗಾಳದಲ್ಲಿ ಗೆಲುವಿನ ಹುರುಪು ಮೂಡಿತ್ತು. ಟಿಎಂಸಿ ಪ್ರಮುಖ ಮುಖಂಡ ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ನಾಯಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಬಿಜೆಪಿ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

English summary
Union Minister Prahlad Singh Patel on Sunday claimed the people of West Bengal are angry with the Mamata Banerjee government and the BJP will win over 200 of 294 seats in the state assembly elections slated for April-May this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X