ಪ್ರಾರ್ಥನಾ ಮಂದಿರಗಳು ಓಪನ್; ಒಮ್ಮೆ 10 ಜನಕ್ಕೆ ಮಾತ್ರ ಪ್ರವೇಶ

ಕೋಲ್ಕತ್ತಾ, ಮೇ 29 : "ಪಶ್ಚಿಮ ಬಂಗಾಳದಲ್ಲಿನ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ಜೂನ್ 1ರಿಂದ ತೆರೆಯಲಾಗುತ್ತದೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದರು. 4ನೇ ಹಂತದ ಲಾಕ್ ಡೌನ್ ಮೇ 31ರಂದು ದೇಶದಲ್ಲಿ ಅಂತ್ಯಗೊಳ್ಳಲಿದೆ.

Recommended Video

      Amphan, most deadliest cyclone in last 20 years | Oneindia Kannada

      ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ಈ ಕುರಿತು ಮಾಹಿತಿ ನೀಡಿದರು. "ಎಲ್ಲಾ ಪ್ರಾರ್ಥನಾ ಮಂದಿರಗಳು ಬಾಗಿಲು ತೆರೆದ ಬಳಿಕ ಒಂದು ಬಾರಿಗೆ 10ಕ್ಕಿಂತ ಹೆಚ್ಚಿನ ಜನರನ್ನು ಒಳಗೆ ಬಿಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

      "ಜೂನ್ 1ರಿಂದ ಟೀ ಮತ್ತು ಜ್ಯೂಸ್ ಅಂಗಡಿಗಳು ಬಾಗಿಲು ತೆರೆಯಲು ಅವಕಾಶ ನೀಡಲಾಗುತ್ತದೆ. ಶೇ 100ರಷ್ಟು ಸಿಬ್ಬಂದಿ ಜೊತೆಗೆ ಅವರು ಕಾರ್ಯ ನಿರ್ವಹಣೆ ಮಾಡಬಹುದು" ಎಂದು ಮಮತಾ ಬ್ಯಾನರ್ಜಿ ಹೇಳಿದರು.

      All Places OF Worship Open From June 1 In West Bengal

      "ರಾಜ್ಯದಲ್ಲಿ ಜೂನ್ 1ರ ಸೋಮವಾರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಎಲ್ಲಾ ಸಿಬ್ಬಂದಿಗಳು ಕಚೇರಿಯಿಂದ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ" ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.

      ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ದಾಖಲಾಗಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4536. 295 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಜೂನ್ 1ರಿಂದ ವಿವಿಧ ರಾಜ್ಯಗಳಲ್ಲಿ ಪ್ರಾರ್ಥನಾ ಮಂದಿರ ಬಾಗಿಲು ತೆರೆಯುವಂತೆ ಬಂಗಾಳದಲ್ಲಿಯೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+