ಕೋಲಾರ; ಕುಡಿದ ಮತ್ತಿನಲ್ಲಿ ಚಿಕ್ಕಪ್ಪನನ್ನು ಕೊಂದ ಯುವಕ
ಕೋಲಾರ, ನವೆಂಬರ್ 2: ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ತನ್ನ ಚಿಕ್ಕಪ್ಪನನ್ನೇ ಇರಿದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆನ್ನಗಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಜಿಕುಮಾರ್ (34) ಕೊಲೆಯಾದ ವ್ಯಕ್ತಿ. ರಾತ್ರಿ ವಿಜಿಕುಮಾರ್ ಮತ್ತು ಪ್ರಕಾಶ್ (20) ಮಧ್ಯೆ ಕುಟುಂಬದ ವಿಷಯಕ್ಕೆ ಜಗಳವುಂಟಾಗಿದ್ದು, ಕುಡಿದ ಅಮಲಿನಲ್ಲಿದ್ದ ಪ್ರಕಾಶ್ ಮಾತಿಗೆ ಮಾತು ಬೆಳೆಸಿ ಜಗಳ ತಾರಕಕ್ಕೇರಿದೆ. ಇದೇ ಸಮಯ ವಿಜಿಕುಮಾರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ನ.1ರ ರಾತ್ರಿ ಈ ಕೃತ್ಯ ಎಸಗಲಾಗಿದೆ. ಈತ ಕೊಲೆ ಮಾಡಿದ ವಿಷಯ ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಸ್ಥಳೀಯರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ನಂತರ ಪೊಲೀಸರಿಗೆ ಕೊಲೆಯ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Recommended Video
ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಿಕುಮಾರ್ ಮೃತದೇಹವನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕಾಶನನ್ನು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications