ಕೋಲಾರದ ವಿಸ್ಟ್ರಾನ್ ದಾಂಧಲೆ ಪ್ರಕರಣ: 11 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಕೋಲಾರ, ಏಪ್ರಿಲ್ 7: ಕೋಲಾರದ ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು 11 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ತಿಳಿಸಿದರು.

ಕೋಲಾರದ ಹೋಂಡಾ ಕಂಪನಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಸ್ಟ್ರಾನ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಎಸ್ಪಿಗಳು ತನಿಖೆ ನಡೆಸಿದ್ದು, ಹನ್ನೊಂದು ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದರು.

ಇನ್ನು ವಿಸ್ಟ್ರಾನ್ ದಾಂಧಲೆ ಪ್ರಕರಣದ ತನಿಖೆಯಲ್ಲಿ ಕಂಡುಬಂದಂತೆ, ವೇತನ, ಓಟಿ ವೇತನ ಸೇರಿದಂತೆ ಹಾಜರಾತಿ ಸಿಸ್ಟಮ್‌ನಲ್ಲಿ ಸಮಸ್ಯೆ ಇದ್ದ ಪರಿಣಾಮ ಹಾಗೂ ಸಡನ್ ಪ್ರಿಫೇರ್‌ನಿಂದಾಗಿ ಕಂಪನಿಯಲ್ಲಿ ಗಲಾಟೆ ಆಗಲು ಕಾರಣವಾಗಿದೆ ಎಂದರು‌.

Wistron Violence Case: 11,000 Pages Chargesheet Submitted: Kolar SP

ಅಲ್ಲದೆ ದಾಂಧಲೆಗೆ, ಹೊರಗಡೆಯಿಂದ ಯಾವುದೇ ಕುಮ್ಮಕ್ಕು ಇಲ್ಲ ಎನ್ನುವುದು ನಮ್ಮ ತನಿಖೆಯಿಂದ ಕಂಡುಬಂದಿದೆ ಎಂದು ತಿಳಿಸಿದ ಅವರು, ಇನ್ನು 170 ಜನರನ್ನು ಬಂಧಿಸಿದ್ದು, 30 ಜನರನ್ನು ಜೈಲಿಗೆ ಕಳುಹಿಸಲಾಗಿದ್ದು, ಜೊತೆಗೆ ನಾಲ್ವರು ಬೇಲ್ ಪಡೆದಿದ್ದಾರೆ ಎಂದು ಕೋಲಾರ ಎಸ್ಪಿ ಮಾಹಿತಿ ನೀಡಿದರು.

Recommended Video

      ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ಸೇವೆ, ಕರ್ತವ್ಯಕ್ಕೆ ಗೈರಾದ ಸಾರಿಗೆ ನೌಕರರು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+