ಕೋಲಾರದಿಂದ ಬೆಂಗಳೂರು, ಮೈಸೂರು ರೈಲು ಪುನರಾರಂಭ

ಕೋಲಾರ, ಡಿಸೆಂಬರ್ 07: ಕೋಲಾರದಲ್ಲಿ ಲಾಕ್ ಡೌನ್ ನಂತರ ಸ್ಥಗಿತಗೊಂಡಿದ್ದ ರೈಲು ಸಂಚಾರವನ್ನು ಎಂಟು ತಿಂಗಳ ಬಳಿಕ ಮತ್ತೆ ಆರಂಭಿಸಲಾಗಿದೆ. ಸೋಮವಾರದಿಂದ ರೈಲು ಸಂಚಾರಕ್ಕೆ ಕೋಲಾರದ ಕೆಜಿಎಫ್ ನಲ್ಲಿ ಚಾಲನೆ ನೀಡಲಾಗಿದೆ.

ಕೊರೊನಾ ಕಾರಣವಾಗಿ ಲಾಕ್ ಡೌನ್ ವಿಧಿಸಿದ ನಂತರ ರೈಲು ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಸೋಮವಾರ ಸಂಚಾರವನ್ನು ಪುನರಾರಂಭಿಸಲಾಗಿದೆ. ಬರೋಬ್ಬರಿ ಏಳೆಂಟು ತಿಂಗಳ ಬಳಿಕ ರೈಲು ಸಂಚಾರ ಆರಂಭವಾಗಿದೆ.

ಪ್ರತಿದಿನ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆಯಿಂದ ಬೆಂಗಳೂರಿಗೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. ರೈಲು ಪ್ರಯಾಣಿಕರಲ್ಲಿ ಹೆಚ್ಚಿನ ಮಂದಿ ಉದ್ಯೋಗಕ್ಕೆ ಹೋಗುವವರಾಗಿದ್ದು, ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಪರದಾಡುತ್ತಿದ್ದರು.

Train Service Resumed In Kolar After Eight Months

ಲಾಕ್ ಡೌನ್ ತೆರವಿನ ನಂತರ ಜನರು ಬಸ್ ನಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ ರೈಲ್ವೆ ಸಚಿವಾಲಯಕ್ಕೆ ರೈಲು ಸಂಚಾರ ಪುನರಾರಂಭಿಸಲು ಮನವಿ ಮಾಡಿದ್ದರು. ಇದೀಗ ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ ಆರು ದಿನಗಳ ಕಾಲ ಡೆಮೋ ರೈಲು ಸಂಚಾರಕ್ಕೆ ಸಂಸದ ಮುನಿಸ್ವಾಮಿ ಚಾಲನೆ ನೀಡಿದ್ದಾರೆ. ಬೆಳಿಗ್ಗೆ ಏಳು ಗಂಟೆಗೆ ಬೆಂಗಳೂರು ಮಾರ್ಗದ ರೈಲು ಹೊರಟಿದ್ದು, ಕೆಜಿಎಫ್-ಬಂಗಾರಪೇಟೆ-ಮಾಲೂರು-ವೈಟ್ ಫೀಲ್ಡ್-ಕಂಟೋನ್ಮೇಟ್-ಬೆಂಗಳೂರು ಕೇಂದ್ರ ಈ ಮಾರ್ಗದಲ್ಲಿ ರೈಲು ಸಂಚಲಿಸಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಎಚ್ಚರಿಕೆ ನೀಡಿದ್ದು, ಒಂದು ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಪ್ರಯಾಣ ಮಾಡಿದರೆ ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.

ಸಂಜೆ 5 ಗಂಟೆಗೆ ಮತ್ತೊಂದು ರೈಲು ಮೈಸೂರಿಗೆ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+