ಮಾಲೂರು: ಕೆಐಎಡಿಬಿ ಅಧ್ಯಕ್ಷರಾಗಿ ಶ್ರೀಪ್ರಕಾಶ್ ಮರು ಆಯ್ಕೆ
ಕೋಲಾರ, ಅಕ್ಟೋಬರ್ 01: ಕೋಲಾರದ ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕೆ ಸಂಘದ ಅಧ್ಯಕ್ಷರನ್ನಾಗಿ ಶ್ರೀಪ್ರಕಾಶ್ ಅವರನ್ನು ಮರು ಆಯ್ಕೆ ಮಾಡಲಾಯಿತು.
ಕೆಐಎಡಿಬಿಯ ಆರನೇ ವರ್ಷದ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನವನ್ನು ಸರ್ವ ಸದಸ್ಯರು ಕೈಗೊಂಡಿದ್ದು. ಶ್ರೀಪ್ರಕಾಶ್ ಅವರ ಆಯ್ಕೆಯು ಎರಡು ವರ್ಷಗಳ ಅವಧಿಗೆ ಇರಲಿದೆ.
ಅದೇ ರೀತಿ ಉಪಾಧ್ಯಕ್ಷರಾಗಿ ಯು.ಸರ್ವಶ್ರೀ ಬಾಲಕೃಷ್ಣನ್, ಗೌರವ ಕಾರ್ಯದರ್ಶಿಯಾಗಿ ಕೆ.ಕೇಶವ್, ಜಂಟಿ ಕಾರ್ಯದರ್ಶಿಯಾಗಿ ಬಿ.ಆರ್.ಬದ್ರಿನಾಥ್, ಖಜಾಂಚಿಯಾಗಿ ರಮಾ ಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಪ್ರಕಾಶ್ ಬಾಬು, ಕೆ.ಪಂಕಜ್, ಮಹಾಪಾತ್ರ, ಶ್ರೀನಿವಾಸ ಗುಪ್ತಾ ಅವರನ್ನೂ ಸಹ ಎರಡು ವರ್ಷದ ಅವಧಿಗೆ (2018-2020) ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.












Click it and Unblock the Notifications