ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ; ಜೆಡಿಎಸ್ ಶಾಸಕನಿಗೆ ಸವಾಲು!

ಕೋಲಾರ, ಸೆಪ್ಟೆಂಬರ್ 20; ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದರು. ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತೇನೆ ಎಂದು ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ತೊರೆಯುತ್ತೇನೆ ಎಂದು ಹೇಳಿರುವ ಶಾಸಕ ಕೆ. ಶ್ರೀನಿವಾಸ ಗೌಡಗೆ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸವಾಲು ಹಾಕಿದ್ದಾರೆ. "ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ" ಎಂದು ಸವಾಲು ಹಾಕಿದ್ದಾರೆ.

ಕೆ. ಸಿ. ವ್ಯಾಲಿ ಯೋಜನೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆ. ಶ್ರೀನಿವಾಸ ಗೌಡ ವಿರುದ್ಧ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

ಈ ನಡುವೆ ಕೆ. ಶ್ರೀನಿವಾಸ ಗೌಡ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆಯನ್ನು ನಡೆಸಿದ್ದರು. ಮಗನಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ಸಹ ಕೇಳಿದ್ದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಸಹ ಈಗಾಗಲೇ ಕಾಂಗ್ರೆಸ್ ಸೇರುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಉಂಡ ಮನೆಗೆ ದ್ರೋಹ ಬಗೆಯುವವರು

ಉಂಡ ಮನೆಗೆ ದ್ರೋಹ ಬಗೆಯುವವರು

ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, "ಉಂಡ ಮನೆಗೆ ದ್ರೋಹ ಬಗೆಯುವವರು ಎಂದರೆ ಇವರೇ. ದೇವೇಗೌಡರ ಕುಟುಂಬದ ಋಣದಲ್ಲಿ ಇರುವಂತಹವರು ಅವರ ವಿರುದ್ಧವೇ ಮಾತನಾಡುವಷ್ಟು ನೀಚತನ ತೋರಿಸುತ್ತಾರೆ. ಜೆಡಿಎಸ್ ಚಿನ್ಹೆ ಮೇಲೆ ಗೆದ್ದವರು ಮೊದಲು ರಾಜೀನಾಮೆ ಕೊಟ್ಟು ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ" ಎಂದು ಸವಾಲು ಹಾಕಿದರು.

ನೀರು ಕುಡಿ ಎಂದವರು ಯಾರು?

ನೀರು ಕುಡಿ ಎಂದವರು ಯಾರು?

"ಕೆ. ಸಿ. ವ್ಯಾಲಿ ಕೆರೆಯ ನೀರನ್ನು ಮನೆಗೆ ತೆಗೆದುಕೊಂಡ ಹೋಗಿ ಎಷ್ಟು ಬೇಕಾದರೂ ಕುಡಿ ಎಂದು ಅಂದವರು ಯಾರು?. ಎಚ್. ಡಿ. ಕುಮಾರಸ್ವಾಮಿ ಆಡಳಿತದ ಬಗ್ಗೆ ಮಾತನಾಡುವ ಯೋಗ್ಯತೆ ಶ್ರೀನಿವಾಸಗೌಡರಿಗೆ ಇದೆಯೇ?. ಕುಮಾರಸ್ವಾಮಿ ದೇಶದಕ್ಕೆ ಮಾದರಿ ಎನ್ನುವಂತೆ ರೈತರ ಸಾಲ ಮನ್ನಾ ಮಾಡಿದರು. ಅಂತಹ ವ್ಯಕ್ತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಹೀಗೆ ಮಾತನಾಡಲು ಬಾಯಿ ಹೇಗೆ ಬರುತ್ತದೆ?" ಎಂದು ವೆಂಕಟಶಿವಾರೆಡ್ಡಿ ಹೇಳಿದರು.

ಜೆಡಿಎಸ್ ಟಿಕೆಟ್ ಕೊಡಿಸಿದ್ದು ನಾನೇ

ಜೆಡಿಎಸ್ ಟಿಕೆಟ್ ಕೊಡಿಸಿದ್ದು ನಾನೇ

"ಈ ದೊಡ್ಡ ಮನುಷ್ಯನಿಗೆ ಪಕ್ಷದ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರ ಬಳಿ ಶಿಫಾರಸು ಮಾಡಿದವನು ನಾನೇ. ನಂತರ ಶಾಸಕನಾಗಿ ಇವತ್ತು ಯಾರದೋ ಮಾತು ಕೇಳಿ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆ" ಎಂದು ವೆಂಕಟಶಿವಾರೆಡ್ಡಿ ಹೇಳಿದರು.

2018ರ ಚುನಾವಣೆಯಲ್ಲಿ ಕೆ. ಶ್ರೀನಿವಾಸ ಗೌಡ ಕೋಲಾರ ಕ್ಷೇತ್ರದಲ್ಲಿ 82,788 ಮತಗಳನ್ನು ಪಡೆದು ಜಯಗಳಿಸಿದ್ದರು. ಮೊದಲು ಕಾಂಗ್ರೆಸ್ ಪಕ್ಷದಲ್ಲಿದಲ್ಲಿಯೇ ಇದ್ದ ಮಾಜಿ ಸಚಿವ ಶ್ರೀನಿವಾಸ ಗೌಡ ಜೆಡಿಎಸ್ ಸೇರಿ ಗೆದ್ದಿದ್ದರು.

Recommended Video

    IPL ತಂಡಗಳ ಕೋಚ್ ಇವ್ರೆ ನೋಡಿ | Oneindia Kannada
    ಕೆ. ಸಿ. ವ್ಯಾಲಿ ಯೋಜನೆ ಬಗ್ಗೆ ಮಾತು

    ಕೆ. ಸಿ. ವ್ಯಾಲಿ ಯೋಜನೆ ಬಗ್ಗೆ ಮಾತು

    ಶಾಸಕ ಕೆ. ಶ್ರೀನಿವಾಸ ಗೌಡ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಕೋಲಾರ ಜಿಲ್ಲೆಗೆ ಕೆ. ಸಿ. ವ್ಯಾಲಿ ನೀರು ತಂದು ರಮೇಶ್ ಕುಮಾರ್ ಎಂದೂ ಮರೆಯಲಾರದಂತಹ ಕೆಲಸ ಮಾಡಿದ್ದಾರೆ. ಆದರೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅದನ್ನು ಕೊಳಚೆ ನೀರು ಎಂದು ಹೇಳಿರುವುದು ಸರಿಯಲ್ಲ. ಬರಡು ಭೂಮಿ ಎನಿಸಿಕೊಂಡಿರುವ ಕೋಲಾರಕ್ಕೆ ಕೆ. ಸಿ. ವ್ಯಾಲಿ ನೀರು ಬಹಳ ಪ್ರಾಮುಖ್ಯವಾಗಿದೆ" ಎಂದು ಹೇಳಿದ್ದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+