ಕೋಲಾರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಪೋಲಿಸ್ ವಾಹನ, ಮುಂದಾಗಿದ್ದೇನು ಗೊತ್ತಾ?
ಕೋಲಾರ, ನವೆಂಬರ್, 11: ಬೈಕ್‌ಗೆ ಪೋಲಿಸ್ ವಾಹನ ಡಿಕ್ಕಿ ಹೊಡೆದಿದ್ದು, ಈ ವೇಳೆ ದ್ವಿಚಕ್ರ ವಾಹನ ಸವಾರರಿಬ್ಬರಿಗೆ ಗಾಯವಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾದ ಘಟನೆ ಕೋಲಾರದಲ್ಲಿ ನಡೆದಿದೆ.
ಬೆಂಗಳೂರುನಿಂದ ಕೋಲಾರದಲ್ಲಿ ನಡೆಯುವ ಸಿಎಂ ಕಾರ್ಯಕ್ರಮಕ್ಕೆ ತೆರಳುತಿದ್ದ ವೇಳೆ ಪೊಲೀಸ್ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಾಷ್ಟೀಯ ಹೆದ್ದಾರಿ ಬೆತ್ತನಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಬಳಿಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಬೈಕ್ ಸವಾರನ ಮೇಲೆ ಹರಿದ ಗ್ಯಾಸ್ ಲಾರಿ
ಇನ್ನು ರಸ್ತೆ ಮಧ್ಯೆ ಮಲಗಿದ್ದ ಹಸುವಿಗೆ ಡಿಕ್ಕಿಯೊಡೆದು ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಗ್ಯಾಸ್ ಲಾರಿ ಹರಿದ ಪರಿಣಾಮ ಬೈಕ್ ಸವಾರನ ದೇಹ ಛಿದ್ರ-ಛಿದ್ರವಾಗಿ ರಸ್ತೆ ಮಧ್ಯೆ ಹರಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಇತ್ತೀಚೆಗಷ್ಟೇ ನಡೆದಿತ್ತು.
ಮೃತನನ್ನ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದ 43 ವರ್ಷದ ವಿಶ್ವೇಂದ್ರ ಎಂದು ಗುರುತಿಸಲಾಗಿದೆ. ಮೂಡಿಗೆರೆಯಲ್ಲಿ ಹಾದುಹೋಗುವ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಮಧ್ಯೆ ಮಲಗಿದ್ದ ಹಸು ಕಾಣದೆ ಬೈಕಿನಲ್ಲಿದ್ದ ಬೈಕ್ ಸವಾರ ಹಸುವಿಗೆ ಡಿಕ್ಕಿಯೊಡೆದು ಕೆಳಗೆ ಬಿದ್ದಿದ್ದಾನೆ. ಹಿಂದೆಯಿಂದ ಬರುತ್ತಿದ್ದ ಗ್ಯಾಸ್ ಲಾರಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಹರಿದಿತ್ತು.
ಗ್ಯಾಸ್ ಲಾರಿ ಹರಿದ ಪರಿಣಾಮ ಬೈಕ್ ಸವಾರನ ದೇಹ ರಸ್ತೆ ಮಧ್ಯೆ ಛಿದ್ರ-ಛಿದ್ರವಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಆತನ ಮೃತದೇಹವನ್ನ ಆಸ್ಪತ್ರೆಗೆ ಸಾಗಿಸಲಾಗದಷ್ಟು ಮಟ್ಟಕ್ಕೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬಂದ ಆಂಬುಲೆನ್ಸ್ ಚಾಲಕ ಮೃತದೇಹದ ತುಂಡುಗಳನ್ನ ಆಯ್ದು...ಆಯ್ದು.... ಸ್ಟ್ರಚ್ಚರ್ ಮೇಲೆ ಹಾಕಿಕೊಳ್ಳುವಷ್ಟು ದೇಹ ಛಿದ್ರವಾಗಿತ್ತು.
ಬೈಕಿನ ಹಿಂದೆ ಕೂತಿದ್ದ ಮಹಿಳೆ ಲಕ್ಷ್ಮಿ ಎಂಬುವರು ಕಾಲು ಕೂಡ ಕಟ್ ಆಗಿತ್ತು. ಅವರಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಹ್ಯಾಂಡ್ ಪೋಸ್ಟ್‍ನಿಂದ ಕೊಟ್ಟಿಗೆಹಾರದವರೆಗಿನ 22 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಮಧ್ಯೆ ಹಗಲಿರುಳು ರಾಸುಗಳು ರಸ್ತೆ ಮಧ್ಯೆ ಇರೋದ್ರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಿದ್ದರು.
ಹಸುಗಳಿಗೆ ಗುದ್ದಿ, ಹಸುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಗಳು ಆಗಿವೆ. ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಈ ಬಗ್ಗೆ ಬೀಡಾಡಿ ಹಸುಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications