Video: ದೇವರೇ ಮದುವೆ ನಿಲ್ಲಿಸಪ್ಪಾ ಎಂದು ಚಿಕ್ಕ-ತಿರುಪತಿಗೆ ಪತ್ರ!
ಕೋಲಾರ, ಜುಲೈ 28: ದೇವ್ರೇ ನಮಗೆ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಪ್ಪ. ಎಲ್ಲ ಕಷ್ಟಗಳನ್ನು ನಿವಾರಿಸು. ಒಳ್ಳೆಯ ದುಡಿಮೆ ಮೂಲಕ ಸಾಕಷ್ಟು ಹಣ ಸಂಪಾದಿಸುವಂತೆ ಆಶೀರ್ವದಿಸು. ಹೀಗೆ ದೇವರಿಗೆ ಭಕ್ತರು ಸಲ್ಲಿಸುವ ಬೇಡಿಕೆಗಳು ಒಂದು ಎರಡಲ್ಲ. ಆದರೆ ಇಲ್ಲಿನ ಭಕ್ತರು ದೇವರಿಗೆ ಸಲ್ಲಿಸುವ ಮನವಿ ಪತ್ರಗಳು ಸ್ವಲ್ಪ ವಿಭಿನ್ನ ಹಾಗೂ ವಿಶೇಷವಾಗಿವೆ.
Recommended Video

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಮೊದಲಿನಿಂದಲೂ ಒಂದು ಪದ್ಧತಿ ರೂಢಿಯಲ್ಲಿದೆ. ದೇವಸ್ಥಾನದ ಹುಂಡಿಗೆ ಹಣ ಹಾಕುವ ಭಕ್ತರು ಅದರ ಜೊತೆಗೆ ಕೆಲವು ಬೇಡಿಕೆಯ ಪತ್ರಗಳನ್ನೂ ಹಾಕುತ್ತಾರೆ. ಹೀಗೆ ಭಕ್ತರು ಹಾಕಿರುವ ಬೇಡಿಕೆ ಪತ್ರಗಳೇ ಓದುಗರು ಹುಬ್ಬೇರಿಸುವಂತೆ ಮಾಡಿವೆ.
ಕೋಲಾರದ ಪ್ರಸಿದ್ಧ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಮುಜರಾಯಿ ಇಲಾಖೆ ನಡೆಸುತ್ತಿರುವ ಹುಂಡಿ ಎಣಿಕೆ ಕಾರ್ಯದ ಸಂದರ್ಭದಲ್ಲಿ ಕಾಣಿಕೆ ಹಣದ ಜೊತೆಗೆ ಕಲವು ಪತ್ರಗಳು ಸಿಕ್ಕಿವೆ. ಈ ಪತ್ರಗಳಲ್ಲಿ ಉಲ್ಲೇಖವಾಗಿರುವ ಭಕ್ತರ ಬೇಡಿಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಸುದ್ದಿ ಆಗುತ್ತಿವೆ. ಹಾಗಾದರೆ ಭಕ್ತರ ಬೇಡಿಕೆ ಪತ್ರದಲ್ಲಿ ಏನು ಬರೆದಿದ್ದರು ಎನ್ನುವ ಕುತೂಹಲಕ್ಕೆ ಉತ್ತರಕ್ಕಾಗಿ ಮುಂದೆ ಓದಿ.

ಭಕ್ತರು ಬರೆದ ಪತ್ರದಲ್ಲಿ ಏನಿತ್ತು?:
"ಈಗಾಗಲೇ ನಿಶ್ಚಯವಾಗಿರುವ ಮದುವೆಯು ರದ್ದಾಗಲಿ. ವಧುವಿನ ಹೆಸರು ಬರೆದು ಇಂಥವರಿಗೆ ಶಿಕ್ಷೆ ಕೊಡು ಸ್ವಾಮಿ. ನನಗಾಗಲಿ ನನ್ನ ಕುಟುಂಬಸ್ಥರಿಗಾಗಲಿ ಅವರಿಂದ ತೊಂದರೆ ಆಗದಿರಲಿ. ನಿಶ್ಚಿತಾರ್ಥ ಮುರಿದು ಬೀಳಲಿ.
* ನ್ಯಾಯಾಲಯದಲ್ಲಿ ಹೂಡಿರುವ ಕೇಸ್ ಸಂಧಾನಕ್ಕೆ ಬರಲಿ.
* ಜೀವನದಲ್ಲಿ ನಾವು ಯಾವತ್ತೂ ಅವರ ಮುಖವನ್ನು ನೋಡಬಾರದು.
* ನಿಶ್ಚಿತಾರ್ಥದ ಖರ್ಚು ಬಂದು ತೆಗೆದುಕೊಂಡು ಹೋಗಲಿ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications