"ಭಗವಂತನ ಇಚ್ಛೆ ಸಿಎಂ ಮೇಲೆ ಇರೋದಕ್ಕೇ ಕೊರೊನಾ ನಿಯಂತ್ರಣವಾಗಿದೆ"
ಕೋಲಾರ, ಜುಲೈ 22: ಕೋಲಾರದ ಶ್ರೀನಿವಾಸಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Recommended Video
ಕೋಲಾರಕ್ಕೆ ಇಂದು ಭೇಟಿ ನೀಡಿದ್ದ ಅವರು, "ಭಗವಂತನ ಇಚ್ಛೆ ನಮ್ಮ ಮುಖ್ಯಮಂತ್ರಿ ಅವರ ಮೇಲೆ ಇರೋದರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಆಗುತ್ತಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ರೆ ಭಗವಂತನ ಕೈಯಲ್ಲೂ ಉಳಿಸೋಕೆ ಆಗ್ತಿರಲಿಲ್ಲ. ಬೇರೆ ಬೇರೆ ಕಡೆಗೆ ಹೋಗಿ ಇತಿಹಾಸ ಬರೆದವರು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ಅವರ ಮೇಲೆ ಕಿಡಿಕಾರಿದರು.

"ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಿಹಾರ್ ಜೈಲಿನಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದರು? ಕೊರೊನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ಸಹಕಾರ ನೀಡುತ್ತಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಇಂತಹ ಸಂದರ್ಭ ಬಂದಾಗ ಸಹಕರಿಸಿದ್ದೇವೆ. ಕಿಟ್ ನಲ್ಲಿ ಹಗರಣ ಆಗಿದೆ ಅಂತ ಕಾಂಗ್ರೆಸ್ ಬಾಯಿಗೆ ಬಂದಂತೆ ಸುಮ್ಮನೆ ಮಾತನಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications