• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಧಿಯಾಸೆಗೆ ಕೋಲಾರದಲ್ಲಿ ಶಿವಲಿಂಗ ಅಗೆದ ದುಷ್ಕರ್ಮಿಗಳು

By ವಿಮಲಾ, ಕೋಲಾರ
|

ಕೋಲಾರ, ಜನವರಿ 22: ನಿಧಿ ಆಸೆಗಾಗಿ ಜಮೀನಿನಲ್ಲಿದ್ದ ಶಿವಲಿಂಗವನ್ನು ಅಗೆದು ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

ನಿಧಿ ಆಸೆಗೆ ಮನೆಯನ್ನೆಲ್ಲ ಅಗೆದ; ಕೊನೆಗಾದ ಗತಿ ಯಾರಿಗೂ ಬೇಡ...

ಕೋಲಾರದ ಶ್ರೀನಿವಾಸ ತಾಲೂಕಿನಲ್ಲಿ ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಆಗಿರುವ ನಂಬಿಹಳ್ಳಿ ಗ್ರಾಮದ ಬಯನ್ನರವರ ಚೌಡಪ್ಪರವರಿಗೆ ಸೇರಿದ ಜಮೀನಿನಲ್ಲಿ ಪಂಚಲಿಂಗಗಳಲ್ಲಿ ಒಂದಾದ ಶಿವಲಿಂಗವಿದೆ. ಆ ಶಿವಲಿಂಗದ ಅಡಿಯಲ್ಲಿ ನಿಧಿಯಿದೆ ಎಂದು ನಿಧಿಯ ಆಸೆಯಿಂದ ವಾಮಾಚಾರ ಮಾಡಿಸಿ ಅಗೆಯಲು ಪ್ರಯತ್ನಿಸಿದ್ದಾರೆ.

ನಂತರ ಅಗೆಯಲು ತಂದಿದ್ದ ಕಬ್ಬಿಣದ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. "ನಮ್ಮ ಪೂರ್ವಜರ ಕಾಲದಿಂದಲೂ ಈ ಲಿಂಗಕ್ಕೆ ಪೂಜೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಊರಿನಲ್ಲಿ 5 ಲಿಂಗಗಳಿವೆ. ಅದರಲ್ಲಿ ಒಂದು ಇಲ್ಲಿದೆ. ಮೊದಲು ಇದೇ ರೀತಿಯಾಗಿ ನಿಧಿ ಆಸೆಗಾಗಿ ಲಿಂಗವನ್ನು ಕೆಡವಿದ್ದರು. ಹಾಗೆ ನೆನ್ನೆ ರಾತ್ರಿ ಕೂಡ ನಿಧಿಯ ಆಸೆಗಾಗಿ ಬಂದಿದ್ದಾರೆ. ನಂತರ ಏನಾಯಿತೋ ಗೊತ್ತಿಲ್ಲ. ತಾವು ತಂದಿದ್ದ ವಸ್ತುಗಳನ್ನ ಬಿಟ್ಟು ಪರಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ ಚೌಡಪ್ಪನವರು.

English summary
Miscreants tried to destroy shivalinga in srinivasapura of kolar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X