ಶ್ರೀರಾಮನ ಕಟೌಟ್ ಅನ್ನು ಬ್ಲೇಡ್‌ನಿಂದ ಹರಿದ ದುಷ್ಕರ್ಮಿಗಳು: ಕೋಲಾರದಲ್ಲಿ ಬಿಗುವಿನ ವಾತಾವರಣ
ಕೋಲಾರ ಜನವರಿ 17: ಶ್ರೀರಾಮನ ಕಟೌಟ್ ಅನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಕುಯಿದ ಘಟನೆ ಕೋಲಾರದಲ್ಲಿ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ರಾತ್ರಿ 10.45ಕ್ಕೆ ಶ್ರೀರಾಮನ ಕಟೌಟ್ ಹಾಗೂ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಕುಯಿದ ಘಟನೆ ಕೋಲಾರದ ಮುಳುಬಾಗಿಲು ಗುಣಗುಂಟೆಪಾಳ್ಯೆದಲ್ಲಿ ನಡೆದಿದೆ.
ಸಂಕ್ರಾಂತಿ ಹಿನ್ನೆಲೆಯಲ್ಲಿ ಈ ಕಟೌಟ್‌ಗಳನ್ನು ರಸ್ತೆಗಳ ಇಕ್ಕಲುಗಳಲ್ಲಿ ಹಾಕಲಾಗಿತ್ತು. ಆದರೆ ಕಳೆದ ರಾತ್ರಿ ಕಿಡಿಗೇಡಿಗಳು ಅದನ್ನು ಬ್ಲೇಡ್‌ನಿಂದ ಕುಯಿದು ಹಾಕಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಶ್ರೀರಾಮನ ಭಕ್ತರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಘಟನೆ ಬೆನ್ನಲ್ಲೆ ಪೊಲೀಸರು ಸ್ಥಳದ ಸಿಸಿಟಿವಿ ಕ್ಯಾಮರಾ ಪರಶೀಲಿಸಿ ಕೆಲವರ ವಿಚಾರಣೆಗೆ ಮೂಂದಾಗಿದ್ದಾರೆ. ಮೂರು ನಾಲ್ಕು ಕಡೆ ಕಟೌಟ್ ಅನ್ನು ಬ್ಲೇಡ್‌ನಿಂದ ಹರಿಯಲಾಗಿದೆ ಎಂದು ಆರೋಪಿಸಲಾಗಿದ್ದು ಘಟನೆಗೆ ಕಾರಣರಾದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಶ್ರೀರಾಮನ ಭಕ್ತರು ಘಟನೆಗೆ ಕಾರಣರಾದವರು ಕ್ಷಮೆ ಕೇಳುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆಂದು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಮಲ ಕಿಡಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋಲಾರ ಸಂಸದ ಮುನಿಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ''ಇದೆಲ್ಲವನ್ನು ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ. ಪಾಕಿಸ್ತಾನದ ಏಜೆಂಟ್‌ಗಳನ್ನು ಕೂಡಲೆ ಬಂಧಿಸಬೇಕು. ಸಿಸಿ ಕ್ಯಾಮರಾದಲ್ಲಿ ಘಟನೆಗೆ ಕಾರಣರಾದವರನ್ನು ಪೊಲೀಸರು ಗುರುತಿಸಿದ್ದಾರೆ. ಅವರು ಕಲ್ಲಂಗಡಿ ಮಾರುವ ವ್ಯಕ್ತಿ ಹಾಗೂ ಮಾಂಸದಂಗಡಿ ಇಟ್ಟುಕೊಂಡ ವ್ಯಕ್ತಿ ಈ ಕೃತ್ಯ ಮಾಡಿದ್ದಾನೆಂದು ತಿಳಿದು ಬಂದಿದೆ.
ಮಾರಿಕಾಂಬಾ ಉತ್ಸವದಲ್ಲಿ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡಿದ್ದಾರೆ. ರಾಜ್ಯದಲ್ಲಿರುವ ಪಾಕಿಸ್ತಾನ ಏಜೆಂಟ್‌ಗಳನ್ನು ಬಂಧಿಸಬೇಕು. ಸಿದ್ದರಾಮಯ್ಯ ಅವರು ಬಹುಸಂಖ್ಯಾತರ ಪರವಾಗಿ ನಿಲ್ಲಬೇಕು. ತಪ್ಪು ಮಾಡಿದವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಶ್ರೀರಾಮ ಭಕ್ತರು ಇಲ್ಲಿ ಸೇರಿದ್ದಾರೆ. ಗಲಾಟೆಗೆ ಮುಂದಾಗಬೇಡಿ ಎಂದು ನಾವು ಹೇಳಿದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೆ ತಪ್ಪು ಮಾಡಿದವರು ಕ್ಷಮೆ ಯಾಚನೆ ಮಾಡುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ'' ಎಂದು ಹೇಳಿದರು.
'ಕಾಂಗ್ರೆಸ್ ಆಡಳಿತದಲ್ಲಿ ರಾಮನಿಗೆ ಮನ್ನಣೆ ಇಲ್ಲ'
ಇನ್ನೂ ಈ ಬಗ್ಗೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ''ಕಾಂಗ್ರೆಸ್ ಆಡಳಿತದಲ್ಲಿ ರಾಮನಿಗೆ ಮನ್ನಣೆ ಇಲ್ಲ. ಇದು ಸದಾ ಕಾಲದ ಸತ್ಯ. ರಾಜ್ಯದಲ್ಲಿ ರಾಮ ಭಕ್ತರ ಆಸೆಯಕ್ಕೆ ಪೂರಕವಾದ ಆಡಳಿವಿಲ್ಲ. ರಾಮ ಒಂದು ಕಾಲ್ಪನಿಕ ವ್ಯಕ್ತಿ ಎಂದು ಅವರು ಮೊದಲೇ ಹೇಳಿಬಿಟ್ಟಿದ್ದಾರೆ'' ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ದೃಶ್ಯ ಸ್ಥಳದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಟೌಟ್ ಕರಿದಿದ್ದು ಸ್ಪಷ್ಟವಾಗಿ ಕಂಡುಬಂದಿದೆ. ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಇಬ್ಬರ ಬಂಧನ
ಇನ್ನೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಒಬ್ಬರು ಕಲ್ಲಂಗಡಿ ಹಾಗೂ ಇನ್ನೊಬ್ಬರು ಮಾಂಸದಂಗಡಿ ವ್ಯಾಪಾರಿ ಎಂದು ತಿಳಿದು ಬಂದಿದೆ.












Click it and Unblock the Notifications