ಯಶವಂತಪುರ-ದೆಹಲಿ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ ಡಿವಿಎಸ್

ಬೆಂಗಳೂರು, ಮಾರ್ಚ್ 05: ಅವಿಭಜಿತ ಕೋಲಾರ ಜಿಲ್ಲೆ ಭಾಗದ ಜನರಿಗೆ ಮಂಗಳವಾರ ಮಧ್ಯಾಹ್ನ ಶುಭ ಸುದ್ದಿ ಸಿಕ್ಕಿದೆ. ಬಹು ಕಾಲ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಯಶವಂತಪುರ ಹಾಗೂ ದೆಹಲಿ ನಡುವಿನ ವಿಶೇಷ ರೈಲಿಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಚಾಲನೆ ನೀಡಿದರು.

ನೈಋತ್ಯ ರೈಲ್ವೆ ಪ್ರಕಟಣೆಯಂತೆ ಯಶವಂತಪುರದಿಂದ ದೆಹಲಿಗೆ ತೆರಳುವ ಪ್ರಯಾಣಿಕರ ಪೈಕಿ ಕೋಲಾರ ಭಾಗದವರಿಗೆ ನೇರ ರೈಲುಗಳಿರಲಿಲ್ಲ. ಈಗ ಈ ವಿಶೇಷ ರೈಲು, ಯಶವಂತಪುರದಿಂದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬಂಗಾರಪೇಟೆ ಮಾರ್ಗವಾಗಿ ದೆಹಲಿವರೆಗೆ ಸಂಚರಿಸಲಿದೆ.

ಯಶವಂತಪುರದಿಂದ ಮಂಗಳವಾರದಂದು 12.30ಕ್ಕೆ ಹೊರಡಲಿರುವ ರೈಲು, 1.38ಕ್ಕೆ ಚಿಕ್ಕಬಳ್ಳಾಪುರ, 2.18ಕ್ಕೆ ಚಿಂತಾಮಣಿ, 3.08ಕ್ಕೆ ಕೋಲಾರ, 3.38ಕ್ಕೆ ಬಂಗಾರಪೇಟೆ ತಲುಪಲಿದೆ. ಗುರುವಾರ ಬೆಳಗ್ಗೆ 9.30ಕ್ಕೆ ದೆಹಲಿ ತಲುಪಲಿದೆ.

Minister DV Sadananda Gowda flags off Yeshwanthpur-Delhi Special train

ಆದರೆ, ಈ ರೈಲು ವೇಳಾಪಟ್ಟಿ ತಾತ್ಕಾಲಿಕವಾಗಿದೆ. ಪ್ರಯಾಣಿಕರ ಅನುಕೂಲ ನೋಡಿಕೊಂಡು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ. ಕೋಲಾರ- ಯಶವಂತಪುರ ಬ್ರಾಡ್ ಗೇಜ್ ಮಾರ್ಗದಲ್ಲಿ ಈ ವಿಶೇಷ ರೈಲು ಸಂಚಾರ ಆರಂಭಿಸಿದ ಬಳಿಕ ಮುಂಬೈ, ಚೆನ್ನೈ ರೈಲುಗಳ ಸಂಚಾರಕ್ಕೂ ಬೇಡಿಕೆ ಇದೆ ಅದನ್ನು ಈಡೇರಿಸುವಂತೆ ಸಂಸದ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+