ಅಪ್ರಾಪ್ತೆ ಮೇಲೆ ಅತ್ಯಾಚಾರ: ಹೆಂಡತಿಯಿಂದಲೇ ಇಬ್ಬರಿಗೂ ಮದುವೆ!

ಮಾಲೂರು, ಮಾರ್ಚ್‌ 13: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಹೆಂಡತಿಯೇ ಅಪ್ರಾಪ್ತೆಯೊಂದಿಗೆ ಪತಿಯ ವಿವಾಹ ಮಾಡಿಸಿ ಈಗ ಜೈಲು ಸೇರಿದ್ದಾಳೆ.

ಹೌದು, ಕೋಲಾರ ಜಿಲ್ಲೆ ಮಾಲೂರಿನಲ್ಲಿ ಇಂತಹುದ್ದೊಂದು ಘಟನೆ ನಡೆದಿದೆ. ದೊಡ್ಡ ಕಾಡತೂರು ಗ್ರಾಮದ ಗಂಗಾಧರ ಎಂಬಾತ ದಲಿತ ಮಹಿಳೆ ಪಲ್ಲವಿ ಎಂಬಾಕೆಯನ್ನು ಕೆಲವು ತಿಂಗಳ ಹಿಂದೆ ವಿವಾಹವಾಗಿದ್ದ.

ಪಲ್ಲವಿ ಅವರ ಸಂಬಂಧಿಕರ ಮಗಳು 13 ವರ್ಷದ ಬಾಲಕಿ ಮನೆಗೆ ಬಂದು ಅವರೊಟ್ಟಿಗೆ ವಾಸಿಸುತ್ತಿದ್ದಳು. ಗಂಗಾಧರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಒಡ್ಡಿದ್ದ. ಅದು ಹೇಗೋ ಗ್ರಾಮಸ್ಥರಿಗೆ ಗೊತ್ತಾಗಿ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದರು.

Man rapes a minor girl, wife gets them married

ಮಕ್ಕಳ ಕಲ್ಯಾಣ ಇಲಾಖೆ ಸೂಚನೆಯಂತೆ ಪೊಲೀಸರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ಹೆದರಿದ್ದ ಬಾಲಕಿ ಅತ್ಯಾಚಾರ ನಡೆದಿಲ್ಲ ಎಂದಿದ್ದಳು. ಆದರೆ ಗಂಗಾಧರನ ಪತ್ನಿ ಪಲ್ಲವಿ, ತನ್ನ ಗಂಡನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕದಂತೆ ತಡೆಯುವ ಸಲುವಾಗಿ ಗಂಗಾಧರನನ್ನು ಬಾಲಕಿಯೊಂದಿಗೆ ವಿವಾಹ ಮಾಡಿಸಿದ್ದಾಳೆ.

ಈಗ ಮತ್ತೆ ಮಕ್ಕಳ ಸಹಾಯವಾಣಿಗೆ ದೂರು ಹೋಗಿದೆ. ಈ ಬಾರಿ ನುರಿತ ಮಕ್ಕಳ ಆಪ್ತ ಸಲಹೆಗಾರರೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯೊಂದಿಗೆ ಮಾತನಾಡಿದ್ದಾರೆ. ಬಾಲಕಿಯು ಎಲ್ಲಾ ಘಟನೆಗಳನ್ನು ವಿವರಿಸಿದ್ದಾಳೆ. ಈಗ ಗಂಗಾಧರ ಮತ್ತು ಆತನ ಪತ್ನಿ ಪಲ್ಲವಿ ಜೈಲಿನಲ್ಲಿದ್ದಾರೆ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+