ಕೋಲಾರ: ಭಯೋತ್ಪಾದಕ ಚಟುವಟಿಕೆ ಶಂಕೆ, ಓರ್ವನ ಬಂಧನ
ಕೋಲಾರ, ಜೂನ್ 20: ಭಯೋತ್ಪಾದಕ ಚಟುವಟಿಕೆ ನಡೆಸುತ್ತಾದೆನೆಂಬ ಶಂಕೆಯಿಂದ ಸೈಬರ್ ಹಾಗೂ ಸ್ಥಳೀಯ ಪೊಲೀಸರು ಕೋಲಾರದ ಬಂಗಾರಪೇಟೆ ತಾಲ್ಲೂಕಿನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಗಾರಪೇಟಿ ತಾಲ್ಲೂಕಿನ ಹುಣಸೇಹಳ್ಳಿ ಗ್ರಾಮದ ಶಂಕರ್ ಎಂಬಾತ ಬಂಧನಕ್ಕೊಳಗಾಗಿರುವ ವ್ಯಕ್ತಿ. ಈತ ಹಲವರಿಗೆ ಭಯೋತ್ಪಾಧನೆಗೆ ಸಹಾಯ ಮಾಡುವಂತೆ ಸಂದೇಶಗಳನ್ನು ರವಾನಿಸಿದ್ದ ಎನ್ನಲಾಗಿದೆ.
ಶಂಕಿತನ ಬಳಿ 100ಕ್ಕೂ ಹೆಚ್ಚು ಸಿಮ್ ಕಾರ್ಡ್ ಪತ್ತೆಯಾಗಿದ್ದು, ಹಲವರಿಗೆ 'ಭಯೋತ್ಪಾಧನೆ ನಡೆಸಲು ಸಹಾಯ ಮಾಡಿ ಎಂದು ಸಂದೇಶ ಕಳುಹಿಸಿದ್ದ ಆರೋಪಿಯು, 'ಒಸಾಮಾ ಬಿನ್ ಲಾಡೆನ್ ಇಸ್ ಮೈ ಗಾಡ್' ಎಂದೂ ಸಹ ಸಂದೇಶಗಳನ್ನು ರವಾನಿಸಿದ್ದ ಎನ್ನಲಾಗಿದೆ.

ನಗರದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಂಕರ್ ಬನ್ನೇರಘಟ್ಟ ಬಳಿ ಅಂಬರೀಶ್ ಎಂಬುವರ ಮನೆಯಲ್ಲಿ ವಾಸವಿದ್ದ, ಸ್ವಂತ ಊರಿಗೆ ತೆರಳಿದ್ದ ಆತನನ್ನು ಆತನ ಸ್ವಗ್ರಾಮದಲ್ಲೇ ವಶಕ್ಕೆ ಪಡೆಯಲಾಗಿದೆ.












Click it and Unblock the Notifications