Lok Sabha Election 2024: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ದಳಪತಿಗಳ ಗೆಲುವು ಫಿಕ್ಸ್?‌

ಕೋಲಾರ, ಜೂನ್‌ 01: ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿರುವ ಕೋಲಾರ (ಎಸ್‌ಸಿ ಮೀಸಲು) ಕ್ಷೇತ್ರ ಕಾಂಗ್ರೆಸ್‌ ನಾಯಕರ ಭದ್ರ ಕೋಟೆ. ಈ ಕ್ಷೇತ್ರವನ್ನು ಸತತ ಏಳು ಬಾರಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸಿದ್ದರು, ಅವರು ಈಗ ರಾಜ್ಯ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ.ಈ ಬಾರಿ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ನಾಯಕರ ಕೈ ತಪ್ಪಲಿದೆ.

ಹೌದು, ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಲೋಕಸಭಾ ಕ್ಷೇತ್ರವೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ಪ್ರತಿಷ್ಠೆಯಾಗಿದ್ದು, ಎಸ್‌ಸಿ ಎಡ ವರ್ಗದಿಂದ ಅಭ್ಯರ್ಥಿ ಕೆವಿ ಗೌತಮ್ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕಣಕ್ಕಿಳಿಸಿತ್ತು. ಇತ್ತ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್‌ ಬಾಬು ಅವರ ಕಣದಲ್ಲಿದ್ದು, ಕೋಲಾರದಲ್ಲಿನ ಕಾಂಗ್ರೆಸ್‌ ನಾಯಕರ ಒಳಜಗಳದಿಂದಾಗಿ ಕೋಲಾರ ಕ್ಷೇತ್ರವನ್ನ ಕಳೆದುಕೊಳ್ಳುವ ಆತಂಕ ಎದುರಾಗಿದೆ.

Kolar Lok Sabha Election 2024 Results Who Will Win

ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಆಡಳಿತರೂಢ ಕಾಂಗ್ರೆಸ್ ಹಲವು ತಂತ್ರಗಾರಿಕೆಯನ್ನ ನಡೆಸಿತ್ತು. ಕಾಂಗ್ರೆಸ್ ನಾಯಕರ ಒಳಜಗಳದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಪಾಲಾಗುವ ಎಲ್ಲಾ ಸಾಧ್ಯತೆಗಳು ಇವೆ. ಇದಕ್ಕೆ ಹಿರಿಯ ನಾಯಕ ಕೆ ಎಚ್ ಮುನಿಯಪ್ಪ ಅವರ ಅನುಪಸ್ಥಿತಿಯು ಕಾರಣ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಕೆ ಎಚ್ ಮುನಿಯಪ್ಪ ಅವರು 1991 ರಿಂದ 2019 ರ ವರೆಗೂ ಏಳು ಬಾರಿ ಕೋಲಾರ ಕ್ಷೇತ್ರವನ್ನು ಆಳಿದ್ದಾರೆ.

ಕೋಲಾರದಲ್ಲಿ ಕೆ ಎಸ್‌ ಮುನಿಯಪ್ಪ ಅವರ ವಿರುದ್ಧ ಮಾಜಿ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ನಿಂತ ಕಾರಣ 2019ರ ಲೋಕಸಭೆ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಬಿಜೆಪಿ ಪಾಲಾಗಿದ್ದು, 2019 ರಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಇಲ್ಲಿ ಗೆಲುವು ಸಾಧಿಸಿತ್ತು.

ಕಾಂಗ್ರೆಸ್‌ ನಲ್ಲಿ ಕೋಲಾರ ಅಭ್ಯರ್ಥಿ ಆಯ್ಕೆ ವಿಚಾರದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೋಲಾರದಲ್ಲಿ ಮಲ್ಲೇಶ್ ಬಾಬು ಮತ್ತು ಕೆವಿ ಗೌತಮ್ ಸ್ಪರ್ಧೆ ಸ್ಥಳೀಯ ಮತ್ತು ಹೊರಗಿನವ ಎಂಬ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್‌ನ ಕೆವಿ ಗೌತಮ್ ವಿರುದ್ಧ ಅವರ ಆಯ್ಕೆ ಕೂಡ ಹಲವು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ನಲ್ಲಿ ಉಂಟಾದ ಅಸಮಾಧಾನದಿಂದಾಗಿ ಗೌತಮ್‌ ಪರವಾಗಿ ಕಾಂಗ್ರೆಸ್‌ ನ ಹಿರಿಯ ನಾಯಕರು ಪ್ರಚಾರ ನಡೆಸದೇ ಇರುವುದು ಕಾಂಗ್ರೆಸ್‌ ಅಭ್ಯರ್ಥಿಗೆ ಹಿನ್ನಲೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾದ ಮಲ್ಲೇಶ್‌ ಬಾಬು ಅವರು ಸುಲಭವಾಗಿ ಗೆಲ್ಲಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+