• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿ ಜೊತೆ ಪರಾರಿಯಾಗಿದ್ದ ಕೋಲಾರ ಸ್ವಾಮೀಜಿಯ ಹೊಸ ಗೆಟಪ್

By ಕೋಲಾರ ಪ್ರತಿನಿಧಿ
|

ಕೋಲಾರ, ಮಾರ್ಚ್ 04: ಇದೇ ಫೆಬ್ರವರಿ 27ರಂದು ಯುವತಿಯೊಂದಿಗೆ ಕೋಲಾರದಿಂದ ಪರಾರಿಯಾಗಿದ್ದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಆದರೆ ಪತ್ತೆಯಾಗಿರುವುದಕ್ಕಿಂತ ಹೆಚ್ಚು ಸುದ್ದಿ ಮಾಡಿರುವುದು ಸ್ವಾಮೀಜಿಯ ಬದಲಾದ ವೇಷದ್ದು.

ಖಾವಿಯ ಬಟ್ಟೆಯಲ್ಲೇ ಸ್ವಾಮೀಜಿಯನ್ನು ಕಂಡಿದ್ದ ಜನರು, ಪ್ಯಾಂಟ್ ಶರ್ಟ್ ಹಾಕಿಕೊಂಡು ಹೊಸ ಗೆಟಪ್ ನಲ್ಲಿ ಸ್ವಾಮೀಜಿ ಕಾಣಿಸಿಕೊಂಡಿರುವ ಫೋಟೊ ನೋಡಿ ಅಚ್ಚರಿಗೊಂಡಿದ್ದಾರೆ.

ಸ್ವಾಮೀಜಿ, ಊರಿನಿಂದ 20ರ ಯುವತಿಯೊಂದಿಗೆ ಪರಾರಿಯಾಗಿ, ತಿರುಪತಿಯಲ್ಲಿ ಇಬ್ಬರೂ ಮದುವೆಯಾಗಿದ್ದಾಗಿ ತಿಳಿದುಬಂದಿತ್ತು.

20ರ ಯುವತಿಯೊಂದಿಗೆ ಕಾಣೆಯಾಗಿದ್ದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ

ಪೊಲೀಸರು ನಿರಂತರ ಶೋಧದಲ್ಲಿದ್ದರೂ ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಸ್ವಾಮೀಜಿ ಯುವತಿಯ ಜೊತೆಗೇ ಸಿಕ್ಕಿಬಿದ್ದಿದ್ದು, ಹೊಸ ಗೆಟಪ್ ನಲ್ಲಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ಶಿವರಾತ್ರಿ ದಿನ ನಾಪತ್ತೆಯಾಗಿದ್ದ ಸ್ವಾಮೀಜಿ

ಶಿವರಾತ್ರಿ ದಿನ ನಾಪತ್ತೆಯಾಗಿದ್ದ ಸ್ವಾಮೀಜಿ

ತಮ್ಮ ಮಠಕ್ಕೆ ಬರುತ್ತಿದ್ದ ಯುವತಿ ಜೊತೆ ದತ್ತಾತ್ರೇಯ ಸ್ವಾಮೀಜಿ ಫೆ.27ಕ್ಕೆ ಪರಾರಿಯಾಗಿದ್ದರು. ಶಿವರಾತ್ರಿ ದಿನ ಗ್ರಾಮದಿಂದ ಇಬ್ಬರೂ ನಾಪತ್ತೆಯಾಗಿದ್ದರು. ಆ ಯುವತಿ ಆಗಾಗ್ಗೆ ಮಠಕ್ಕೆ ಬಂದು ಸ್ವಾಮೀಜಿಯ ಪಾದಪೂಜೆ ಮಾಡುತ್ತಿದ್ದಳು. ಮಠದ ಕೆಲಸಕ್ಕೂ ಸಹಾಯ ಮಾಡುತ್ತಿದ್ದಳು. ಅದೇ ಯುವತಿಯೊಂದಿಗೆ ಸ್ವಾಮೀಜಿ ಪರಾರಿಯಾಗಿದ್ದರು.

 ತಿರುಪತಿಯಲ್ಲಿ ಮದುವೆಯಾದ ಮಾಹಿತಿ ನೀಡಿದ್ದ ಸ್ವಾಮೀಜಿ

ತಿರುಪತಿಯಲ್ಲಿ ಮದುವೆಯಾದ ಮಾಹಿತಿ ನೀಡಿದ್ದ ಸ್ವಾಮೀಜಿ

ಇಬ್ಬರೂ ಒಂದೇ ದಿನ ನಾಪತ್ತೆಯಾಗಿದ್ದನ್ನು ಕಂಡ ಯುವತಿ ಕುಟುಂಬಸ್ಥರು ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಯುವತಿಯ ಸೋದರ ಮಾವ ಶಂಕರ್ ಈ ಸಂಬಂಧ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರು ದಾಖಲಿಸಿ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸ್ವಾಮೀಜಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಯುವತಿಯ ಅಣ್ಣ ಕೂಡ ಮಠದಲ್ಲಿ ಕೆಲಸ ಮಾಡುತ್ತಿದ್ದವನಾದ ಕಾರಣ, ಪರಾರಿಯಾದ ಮಾರನೇ ದಿನ ಕರೆ ಮಾಡಿದ್ದ ಸ್ವಾಮೀಜಿ, ನಾವಿಬ್ಬರೂ ತಿರುಪತಿಯಲ್ಲಿ ಮದುವೆಯಾಗಿದ್ದೇವೆ ಎಂದು ಮಾಹಿತಿ ನೀಡಿದ್ದರು.

20 ವರ್ಷದ ಯುವತಿ ಜೊತೆ ದತ್ತಾತ್ರೇಯ ಅವಧೂತ ಸ್ವಾಮೀಜಿ ಪರಾರಿ?

 ಸ್ವಾಮೀಜಿ ಬಗ್ಗೆ ಊರವರ ಆಕ್ರೋಶ

ಸ್ವಾಮೀಜಿ ಬಗ್ಗೆ ಊರವರ ಆಕ್ರೋಶ

ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿಯಾದ ಇವರ ಊರು ಮೂಲತಃ ಬಾಗಲಕೋಟೆಯ ಮುಧೋಳ. ಕೆಲವೇ ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದು, ಮಠವನ್ನು ಅಭಿವೃದ್ಧಿಪಡಿಸಲು ಬಂದಿದ್ದೇನೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದರು. ಗ್ರಾಮಸ್ಥರೂ ನಂಬಿ ಪೂಜೆ ಪುನಸ್ಕಾರಗಳನ್ನು ಕೈಗೊಂಡಿದ್ದರು. ಆದರೆ ಹೀಗೆ ನಂಬಿಕೆ ಹುಟ್ಟಿಸಿ ಇಪ್ಪತ್ತು ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದು ಊರಿನವರಲ್ಲಿ ಆಕ್ರೋಶ ಉಂಟು ಮಾಡಿತ್ತು.

 ಹೊಸ ಲುಕ್ ನಲ್ಲಿ ಸ್ವಾಮೀಜಿ

ಹೊಸ ಲುಕ್ ನಲ್ಲಿ ಸ್ವಾಮೀಜಿ

ನಾಪತ್ತೆಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮದುವೆಯಾಗಿ, ತಮ್ಮ ವೇಷವನ್ನೂ ಬದಲಾಯಿಸಿದ್ದು, ಅವರ ಹೊಸ ಲುಕ್ ಕಂಡು ಭಕ್ತರು ಅಚ್ಚರಿಗೊಂಡಿದ್ದಾರೆ. ಗಡ್ಡ, ಮೀಸೆ ಬಿಟ್ಟು ಕಾವಿ ತೊಟ್ಟು ಸ್ವಾಮೀಜಿಯಂತಿದ್ದವರು ಈಗ ಕ್ಲೀನ್​ ಶೇವ್ ಮಾಡಿ​, ಪ್ಯಾಂಟ್​ ಶರ್ಟ್​ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಸ್ಬಾಮೀಜಿಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

English summary
The photo of Holali Bheemalingeshwara sewashrama Dattatreya Swamiji, who escaped with 20 year girl new look going viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X