ಜಾತಿ ಮೀಸಲಾತಿ: ನಂಜಾವಧೂತ ಸ್ವಾಮೀಜಿ ಕೊಟ್ಟ ಎಚ್ಚರಿಕೆ ಏನು?

ಕೋಲಾರ, ಫೆಬ್ರವರಿ 18: ಸಾವಿರ ಕೋಟಿ ರೂ. ಮೀಸಲಿಟ್ಟು ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಸರ್ಕಾರ ಮಾಡಬೇಕು, ನಮ್ಮದು ಎರಡನೇ ಅತೀ ದೊಡ್ಡ ಸಮುದಾಯವಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠದ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಕೋಲಾರದ ಮಾಲೂರಿನಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ, ಮೀಸಲಾತಿ ವಿಚಾರ ಜ್ವಲಂತ ವಿಷಯವಾಗಿ ಮಾರ್ಪಾಡಾಗಿದೆ. 3A ಮೀಸಲಾತಿಯನ್ನು 33 ಜನಾಂಗ ಹಂಚಿಕೊಳ್ಳಬೇಕು. ನಾವೇನು 2A ಗೆ ಸೇರಿಸಿ ಎಂದು ಕೇಳುತ್ತಿಲ್ಲ, 3A ನಲ್ಲೇ ಇನ್ನಷ್ಟು ಮೀಸಲಾತಿ ಹೆಚ್ಚಿಸಿ ಎಂದು ಬೇಡಿಕೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪರಿಗಣಿಸಲಿಲ್ಲ ಎಂದರೆ ಮುಂದೆ ಏನೂ ಮಾಡಬೇಕು ಎಂದು ಯೋಚಿಸುತ್ತೇವೆ. ಮೊದಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ, ಬಳಿಕ ತೀರ್ಮಾನ ಮಾಡುತ್ತೇವೆ. KPSC ಚೇರ್ ಮನ್ ಆಗಿದ್ದ ಪುಟ್ಟಸ್ವಾಮಿ ಗೌಡ್ರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಎಲ್ಲಾ ವರ್ಗದಲ್ಲಿ ಇರುವವರನ್ನು ಸೇರಿಸಿ ಸಮಿತಿ ಮಾಡಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

Kolar: Caste Reservation: What Is The Warning Gave By Nanjavadhoota Swamiji?

ಒಕ್ಕಲಿಗ ಸಮುದಾಯದ ಸ್ವಾಮೀಜಿಯಾಗಿ, ಸಮುದಾಯದ ಹಿತ ಕಾಯದೆ ಇದ್ದರೆ ಸ್ವಾಮೀಜಿ ಏಕೆ ಆಗ್ಬೇಕು? ಪಂಚಮಸಾಲಿ ಹೋರಾಟವನ್ನು ನಾನು ಗೌರವಿಸುತ್ತೇನೆ. ಜಾತಿ, ಧರ್ಮ ಬಿಟ್ಟು ಸನ್ಯಾಸಿಗಳಾಗಿ ಇರುವ ವ್ಯವಸ್ಥೆಯೇ ಬೇರೆ. ನಾವೆಲ್ಲ ಸಮುದಾಯ ಕಟ್ಟಿಕೊಂಡಿರುವ ಸ್ವಾಮೀಜಿಗಳು, ಹೀಗಾಗಿ ಅವಶ್ಯಕತೆ ಬಂದರೆ ಸ್ವಾಮೀಜಿಗಳು ಹೋರಾಟ ಮಾಡಲೇಬೇಕಾಗುತ್ತದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠದ ನಂಜಾವಧೂತ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+