ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಗಂಭೀರ ಆರೋಪ

ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್‌ ನಾಯಕ​ ರಮೇಶ್​ ಕುಮಾರ್ ಅವರ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದೆ. ಬರೋಬ್ಬರಿ 64 ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ರಮೇಶ್‌ ಕುಮಾರ್‌ ಅವರ ಹೆಸರು ಮುನ್ನೆಲೆಗೆ ಬಂದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿಯಿರುವ ಅರಣ್ಯ ಭೂಮಿ ಒತ್ತುವರಿ ಆರೋಪ ರಮೇಶ್‌ ಕುಮಾರ್‌ ಅವರನ್ನು ಸುತ್ತಿಕೊಂಡಿದೆ.

Allegation Of Forest Land Encroachment Against Former Speaker Ramesh Kumar

ಈ ಭಾಗದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೇ ಮಾಡಲು ಮುಂದಾಗಿದೆ. ಇದಕ್ಕೆ ದಿನಾಂಕವೂ ನಿಗದಿಯಾಗಿದೆ. ಅದರಂತೆ ಹೊಸಹುಡ್ಯ ಗ್ರಾಮದ 122 ಎಕರೆ ಭೂಮಿಯನ್ನು ಏಳು ಜನ ಒತ್ತುವರಿ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಮಾಜಿ ಸ್ಪೀಕರ್‌ ರಮೇಶ್​ ಕುಮಾರ್ ಕೂಡ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಅವಧಿಯಲ್ಲಿ ಈ ಜಮೀನಿನ ಜಂಟಿ ಸರ್ವೇ ನಡೆದಿತ್ತು. ಆದರೆ, ಒತ್ತುವರಿ ವಿಚಾರದಲ್ಲಿ ಹಲವು ಗೊಂದಲಗಳು ಇದ್ದಿದ್ದರಿಂದ ಮತ್ತೊಮ್ಮೆ ಸರ್ವೇ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ರಮೇಶ್‌ ಕುಮಾರ್‌ ಅವರಿಗೆ ಸರ್ವೇ ವೇಳೆ ಸ್ಥಳದಲ್ಲಿರುವಂತೆಯೂ ಹೇಳಲಾಗಿತ್ತು ಎನ್ನಲಾಗಿದೆ.

ಇನ್ನು ಹೊಸಹುಡ್ಯ ಗ್ರಾಮದ ಅರಣ್ಯ ವಲಯದ ಬಳಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಹಾಗಾಗಿ ಭೂಮಿಯ ಮೇಲೆ ಜಂಟಿ ಸರ್ವೇ ಮಾಡುವಂತೆ ಹಾಗೂ ಒತ್ತುವರಿ ಕಂಡುಬಂದಲ್ಲಿ, ಅದನ್ನು ತೆರವುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿತ್ತು.

ಈ ಸಂಬಂಧ ರಾಜ್ಯ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಇತ್ತೀಚೆಗೆ ಪತ್ರ ಬರೆದಿದ್ದರು. ಇಲ್ಲಿನ ಒತ್ತುವರಿ ವಿಚಾರದ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಂತೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಅರಣ್ಯ ವಲಯದಲ್ಲಿ 122 ಎಕರೆ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಇಲ್ಲಿವರೆಗೆ ಯಾವುದೇ ಕ್ರಮ ಜರುಗಿಸಿರಲಿಲ್ಲ. 2013ರಲ್ಲೇ ಕೋರ್ಟ್‌ ಜಂಟಿ ಸರ್ವೇ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಒತ್ತುವರಿ ಆಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿರುವುದಾಗಿ ತಿಳಿದುಬಂದಿದೆ. ಒಟ್ಟಾರೆ ಈ ವಿಚಾರದಲ್ಲಿ ರಮೇಶ್‌ ಕುಮಾರ್‌ ಅವರ ಹೆಸರು ಕೇಳಿಬಂದಿದ್ದು, ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇನ್ನು ಇತ್ತೀಚೆಗೆ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಒಂದು ವೇಳೆ ಒತ್ತುವರಿ ಸಾಬೀತಾದರೆ, ಕಾನೂನು ಕ್ರಮಕ್ಕೂ ಮುಂದಾಗಿದೆ. ನಿನ್ನೆ ಕೂಡ ಅರಣ್ಯ ಇಲಾಖೆ ನಟ ಯಶ್‌ ಅವರ ಟಾಕ್ಸಿಕ್‌ ಸಿನಿಮಾ ಸೆಟ್‌ ಜಾಗಕ್ಕೆ ತೆರಳಿ, ಅಲ್ಲಿ ಮರಗಳನ್ನು ಕಡಿದು ನಾಶ ಮಾಡಿರುವ ಬಗ್ಗೆ ಪತ್ತೆ ಹಚ್ಚಿದೆ. ಶೂಟಿಂಗ್‌ಗಾಗಿ ಭಾರಿ ಪ್ರಮಾಣದ ಮರಗಳನ್ನು ನಾಶ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಎದುರಾಗಿದೆ. ಇದರ ಬೆನ್ನಲ್ಲೇ ರಮೇಶ್‌ ಕುಮಾರ್‌ ಅವರ ವಿರುದ್ಧವೂ ಒತ್ತುವರಿ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+