Get Updates
Get notified of breaking news, exclusive insights, and must-see stories!

ಕಾರವಾರ: ನಾಡಬಾಂಬ್ ಸ್ಫೋಟಿಸಿ ಕಾಡುಹಂದಿಯ ಹತ್ಯೆ, ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮನ

ಕಾರವಾರ, ಆಗಸ್ಟ್‌, 06: ನಾಡಿನ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ಹಂದಿಯೊಂದನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ನಡೆದಿದೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರು ಮತ್ತೊಂದು ಸಜೀವ ಬಾಂಬ್ ಪತ್ತೆ ಮಾಡಿದ್ದಾರೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.

ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆಗಸ್ಟ್‌ 4ರಂದು ನಾಡಬಾಂಬ್ ಸ್ಫೋಟವಾಗಿ ಹಂದಿಯೊಂದು ಮೃತಪಟ್ಟಿತ್ತು. ತಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಂದಿ ಸಾವಿನಿಂದ ಗ್ರಾಮಸ್ಥರು ತೀವ್ರ ದುಖಃಕ್ಕೆ ಒಳಗಾಗಿದ್ದರು. ತಕ್ಷಣ ಈ ಬಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬುವವರನ್ನು ಬಂಧಿಸಿದ್ದರು.

Wild boar killed by Bomb Blast in Karwar, Bomb disposal squad arrival from Mangaluru

ಇನ್ನು ನಾಡ ಬಾಂಬ್ ಸ್ಪೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇದೀಗ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೆಶಗಳಿಗೆ ಬರುವುದನ್ನು ಚೆಂಡಿಯಾ ಗ್ರಾಮದ ಜನರು ಗಮನಿಸಿದ್ದರು.

ಬಳಿಕ ಅದರಲ್ಲಿ ಒಂದು ಹಂದಿ ಜನರ ಸಂಪರ್ಕದಲ್ಲಿಯೇ ಇರುವುದರಿಂದ ಅದಕ್ಕೆ ಹಣ್ಣು, ತರಕಾರಿ ಸೇರಿದಂತೆ ಆಹಾರ ನೀಡುತ್ತಿದ್ದರು. ಕಾಡು ಹಂದಿಯೂ ಜನರಿಗೆ ತೊಂದರೆ ಕೊಡದೇ ರಾತ್ರಿ ವೇಳೆ ಬಂದು ಆಹಾರ ತಿಂದು ಹೋಗುತ್ತಿತ್ತು. ಒಮ್ಮೊಮ್ಮೆ ಹಗಲಿನ ವೇಳೆಯಲ್ಲಿಯೂ ಬರುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+