Get Updates
Get notified of breaking news, exclusive insights, and must-see stories!

ಕುಮಟಾ: ಪುನೀತ್‌ ಅಭಿಮಾನಿಗಳ ಕೊಡುಗೆ: ಗ್ರಂಥಾಲಯವಾದ ಬಸ್ ತಂಗುದಾಣ!

ಕಾರವಾರ, ಜೂನ್‌ 08: ಮೊಬೈಲ್ ಬಳಕೆ ಹೆಚ್ಚಾದ ಬೆನ್ನಲ್ಲೆ ಪುಸ್ತಕ, ಪತ್ರಿಕೆ ಓದುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಕೆಲವೆಡೆ ಗ್ರಂಥಾಲಯಗಳು ಕೂಡ ಬಾಗಿಲು ಮುಚ್ಚಿವೆ. ಆದರೆ ಕುಮಟಾದ ಹೊಸ್ಕೇರಿಯ ನಟ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಬಳಗವೊಂದು ಬಸ್ ನಿಲ್ದಾಣವನ್ನೇ ಗ್ರಂಥಾಲಯವನ್ನಾಗಿಸಿ ಬಿಡುವಿನ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಪುಸ್ತಕದತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ್ಕೇರಿಯ ಪುಟ್ಟ ಬಸ್ ನಿಲ್ದಾಣ ಇದೀಗ ಗ್ರಂಥಾಲಯವಾಗಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ಮೊದಲನೇ ಪುಣ್ಯ ಸ್ಮರಣೆಗೆ ಸ್ಥಳೀಯ ಯುವಕರೇ ಸೇರಿ ರಚಿಸಿಕೊಂಡಿರುವ ಅಭಿಮಾನಿ ಬಳಗ ಗ್ರಂಥಾಲಯ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರನ್ನು ಪುಸ್ತಕದೆಡೆ ಸೆಳೆಯುವ ಪ್ರಯತ್ನ ನಡೆಸಿದೆ.

Puneeth Rajkumar Fans Renovated Hoskeri Bus Stand As A Libreary

ಸುಣ್ಣ ಬಣ್ಣ ಬಳಿದು ಸ್ವಚ್ಚತೆಯೊಂದಿಗೆ ಅಚ್ಚುಕಟ್ಟಾಗಿರುವ ಬಸ್ ನಿಲ್ದಾಣ ಸದ್ಯ ಊರವರ ಪಾಲಿಗೆ ಜ್ಞಾನ ದೇಗುಲದಂತಾಗಿದೆ. ಬಸ್ ನಿಲ್ದಾಣದ ಒಂದು ಮೂಲೆಯಲ್ಲಿಯೇ ಕಪಾಟನ್ನು ಸಿದ್ದಪಡಿಸಿ ಅಲ್ಲಿ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಕಾದಂಬರಿ, ಕಥೆ ಪುಸ್ತಕ, ವ್ಯಾಕರಣ, ಭಾಷಾ ಕಲಿಕಾ ಪುಸ್ತಕ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್ ಅಂಬೇಡ್ಕರ್‌ ಸೇರಿದಂತೆ ಹಲವು ಮಹಾನ್ ನಾಯಕರ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಯಾರು ಬೇಕಾದರು ಪುಸ್ತಕವನ್ನು ಪಡೆದು ಓದಬಹುದಾಗಿದೆ. ಮಾತ್ರವಲ್ಲದೆ ಮನೆಗಳಿಗೂ ತೆಗೆದುಕೊಂಡು ಹೋಗಿ ಓದಲು ಅವಕಾಶ ಕಲ್ಪಿಸಲಾಗಿದೆ. ಓದಿದ ಬಳಿಕ ಸರಿಯಾದ ರೀತಿಯಲ್ಲಿ ತಂದು ಇಡುವಂತೆಯೂ ಗ್ರಾಮದಲ್ಲಿದ್ದವರಿಗೆ ಸೂಚನೆ ಕೂಡ ನೀಡಲಾಗಿದೆ. ಇದರಿಂದ ನಿತ್ಯ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು, ಸಂಜೆ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸುವ ಹಿರಿಯರು ಇಲ್ಲಿ ಕುಳಿತು ಪುಸ್ತಕಳನ್ನು ಓದಲಾರಂಭಿಸಿದ್ದಾರೆ.

ಊರಿನಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ನಾವೆಲ್ಲರೂ ಸೇರಿ ಅಭಿಮಾನಿ ಬಳಗವೊಂದು ರಚಿಸಿಕೊಂಡಿದ್ದೇವು. ಆದರೆ ಪುನೀತ್‌ ಅವರ ಮೊದಲ ಪುಣ್ಯ ಸ್ಮರಣೆಗೆ ಏನಾದರು ಮಾಡಬೇಕು ಎಂದು ಹಿರಿಯರೊಂದಿಗೆ ಚರ್ಚೆ ಮಾಡಿದಾಗ ಗ್ರಂಥಾಲಯ ಬಗ್ಗೆ ತಿಳಿಸಿದ್ದರು. ಅದರಂತೆ ಬಳಗದ ಸದಸ್ಯರೇ ಕೂಡ ಇದಕ್ಕೆ ಬೇಕಾದ ಎಲ್ಲ ಕರ್ಚು ವೆಚ್ಚ ಮಾಡಿ ಗ್ರಂಥಾಲಯ ಪ್ರಾರಂಭಿಸಿದ್ದೇವೆ. ಇದರಿಂದ ನಮಗೆ ಖುಷಿ ಇದೆ.

Puneeth Rajkumar Fans Renovated Hoskeri Bus Stand As A Libreary

ನಮ್ಮದು ಗ್ರಾಮೀಣ ಪ್ರದೇಶವಾಗಿರುವ ಕಾರಣ ಬಸ್ ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ಖಾಲಿ ಕೂರುವ ಬದಲು ಪುಸ್ತಕಗಳನ್ನು ಪಡೆದು ಓದುತ್ತಾರೆ. ಇದನ್ನು ನೋಡಿದಾಗ ಮಾಡಿದ ಕಾರ್ಯಕ್ಕೆ ಹೆಮ್ಮೆಯಾಗುತ್ತದೆ ಎಂದು ಪುನಿತ್‌ರಾಜಕುಮಾರ್ ಅಭಿಮಾನಿ ಬಳಗದ ಸದಸ್ಯ ರವಿ ಪಟಗಾರ ಹೇಳಿದ್ದಾರೆ.

ಸದ್ಯ ಗ್ರಂಥಾಲಯದಲ್ಲಿ ಪುಸ್ತಕ ಹಾಗೂ ಮಾಸ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆ, ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಇಡಲಾಗಿದೆ. ಇದಕ್ಕೆ ಎಲ್ಲರಿಂದಲು ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿರುವ ಕಾರಣ ಮುಂದಿನ ದಿನದಲ್ಲಿ ನಿತ್ಯ ದಿನಪತ್ರಿಕೆಗಳನ್ನು ತಂದು ಇಡುವ ಬಗ್ಗೆ ಬಳಗದ ಸಮಸ್ಯರ ಮುಂದಿದೆ. ಅಲ್ಲದೆ ದಾನಿಗಳು ಕೂಡ ಪುಸ್ತಗಳನ್ನು ನೀಡುತ್ತಿರುವುದರಿಂದ ನಮ್ಮ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವುದು ಖುಷಿ ಇದೆ ಎನ್ನುತ್ತಾರೆ ಬಳಗದ ಸದಸ್ಯ ರವಿ ಪಟಗಾರ.

Puneeth Rajkumar Fans Renovated Hoskeri Bus Stand As A Libreary

ಇಂದಿನ ಮೊಬೈಲ್ ಬಳಕೆಯಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಗ್ರಂಥಾಲಯದ ಮೂಲಕ ಬಸ್ ನಿಲ್ದಾಣಕ್ಕೆ ಬಂದವರು ಪುಸ್ತಕ ತೆರೆದು ನೋಡುವಂತಾಗಿದೆ. ಕೆಲವರು ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುವಷ್ಟು ಗಂಥಾಲಯ ಸಹಕಾರಿಯಾಗಿದೆ. ಇದೊಂದು ಮಾದರಿ ಕಾರ್ಯ ಎಂದು ಸ್ಥಳೀಯ ಶಿಕ್ಷಕರಾದ ಲಕ್ಷ್ಮಿಕಾಂತ ಪಟಗಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+