ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೇ ಜೋರಾಗಿದೆ ವೇಶ್ಯಾವಾಟಿಕೆ ದಂಧೆ
ಕಾರವಾರ, ಮಾರ್ಚ್ 13: ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಇತ್ತ ಪೊಲೀಸ್ ಇಲಾಖೆ ಕೂಡ ಗಮನ ಹರಿಸದೇ ಇದ್ದುದು ದಂಧೆಗೆ ಸಾಥ್ ನೀಡಿದಂತಾಗಿದೆ.
ಮೂಲಗಳ ಪ್ರಕಾರ ದಾಂಡೇಲಿ, ಜೊಯಿಡಾ, ಶಿರಸಿ ಹಾಗೂ ಕಾರವಾರದಲ್ಲಿ ಹೆಚ್ಚಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಸ್ಥಳೀಯ ಏಜೆಂಟ್ ಗಳ ಮುಖೇನ ಈ ಚಟುವಟಿಕೆ ಸಾಗುತ್ತಿದೆ. ದಾಂಡೇಲಿ, ಜೊಯಿಡಾ, ಶಿರಸಿ ಭಾಗಗಳಲ್ಲಿ ಹಾವೇರಿ, ಧಾರವಾಡ ಹಾಗೂ ಹುಬ್ಬಳ್ಳಿ ಕಡೆಗಳಿಂದ ಅತಿ ಹೆಚ್ಚು 'ಗಿರಾಕಿ'ಗಳು ಬರುತ್ತಿದ್ದು, ಕಾರವಾರದಲ್ಲಿ ನೌಕಾಸೇನಾ ಸಿಬ್ಬಂದಿ ಅತಿ ಹೆಚ್ಚಾಗಿ ಈ ದಂಧೆಯ 'ಗಿರಾಕಿ'ಗಳಾಗುತ್ತಿದ್ದಾರೆನ್ನಲಾಗಿದೆ.

ಬಡ ವಿದ್ಯಾರ್ಥಿನಿಯರಿಗೆ ಆಮಿಷ ತೋರಿಸಿ ದಂಧೆ
ಇತ್ತೀಚಿಗಷ್ಟೇ ಶಿರಸಿಯಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕಿಬಿದ್ದಿದ್ದ ಮಹಿಳೆ ಕಳೆದ ಹಲವಾರು ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು ಎಂಬುದು ತಿಳಿದುಬಂದಿತ್ತು. ಈಕೆ ಪೊಲೀಸರ ಭಯವಿಲ್ಲದೇ ದಂಧೆಯಲ್ಲಿ ತೊಡಗಿಕೊಂಡಿದ್ದಳು. ಈ ಮೊದಲೆಲ್ಲ ತಾನೇ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಳು. ಗಿರಾಕಿಗಳು ಹೆಚ್ಚಿದಂತೆ ಸ್ಥಳೀಯ ಯುವತಿಯರು, ಮಹಿಳೆಯರನ್ನೂ ಈ ದಂಧೆಯಲ್ಲಿ ತೊಡಗಿಸುತ್ತಿದ್ದಳು ಎನ್ನಲಾಗಿದೆ.
ಬಡ ಕಾಲೇಜು ಯುವತಿಯರಿಗೆ ಉದ್ಯೋಗ, ಹಣದ ಆಮಿಷ ತೋರಿಸಿ ಈ ದಂಧೆಗೆ ಈಕೆ ಸೇರಿಸುತ್ತಿದ್ದಳು ಎಂಬುದೂ ತಿಳಿದುಬಂದಿದೆ. ಪ್ರಾರಂಭದಲ್ಲಿ ಸ್ಥಳೀಯ ಗಿರಾಕಿಗಳನ್ನು ಹೊಂದಿದ್ದ ಈಕೆ, ಬರಬರುತ್ತ ರಾಜಕಾರಣಿಗಳ ಸಂಪರ್ಕ ಪಡೆದು ಹುಬ್ಬಳ್ಳಿ, ಧಾರವಾಡದಲ್ಲೂ ತನ್ನ ದಂಧೆ ವಿಸ್ತರಿಸಿಕೊಂಡಿದ್ದಳು. ಸ್ಥಳೀಯ ಮಹಿಳೆಯರು, ಯುವತಿಯರನ್ನು ಆ ಭಾಗಗಳಿಗೆ ಪೂರೈಸುತ್ತಿದ್ದಳಷ್ಟೇ ಅಲ್ಲದೇ, ಅಲ್ಲಿಂದ ಬರುವ ಗಿರಾಕಿಗಳಿಗೆ ತನ್ನ ಮನೆಯನ್ನೇ ಅಡ್ಡವಾಗಿಸಿಕೊಂಡಿದ್ದಳು ಎಂಬುದು ತಿಳಿದುಬಂದಿದೆ.

ರೆಸಾರ್ಟ್, ಹೋಮ್ ಸ್ಟೇಗಳಲ್ಲೂ ವೇಶ್ಯಾವಾಟಿಕೆ
ಇನ್ನು, ದಾಂಡೇಲಿ, ಜೊಯಿಡಾ ಭಾಗಗಳಿಗೆ ರಾಜ್ಯ ಸೇರಿದಂತೆ ದೇಶದ ವಿವಿಧೆಡೆಯ ಪ್ರವಾಸಿಗರು ಬರುತ್ತಾರೆ. ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಇಲ್ಲಿ ಕಡಿಮೆಯೇನಿಲ್ಲ. ಹೀಗೆ ಬರುವ ಪ್ರವಾಸಿಗರಲ್ಲಿ ಅನೇಕರು ತಾವು ಪ್ರೇಮಿಗಳು, ದಂಪತಿ ಎಂದು ಹೇಳಿ ರೂಮುಗಳನ್ನು ಪಡೆಯುತ್ತಿದ್ದರು. ಇನ್ನಷ್ಟು ಮಂದಿ ರಾಜಾರೋಷವಾಗಿ ರೆಸಾರ್ಟ್, ಹೋಂ ಸ್ಟೇಗಳ ಮಾಲೀಕರಿಗೆ 'ನಾವು ಬಂದಿದ್ದೇ ಇದಕ್ಕೆ' ಎಂದು ರೂಮು ಪಡೆಯುತ್ತಿದ್ದಾರೆ. ಇವರಿಂದ ಯಾವುದೇ ದಾಖಲೆಗಳನ್ನೂ ಪಡೆಯದ ಮಾಲೀಕರು, ಹಣಕ್ಕಾಗಿ ಖುದ್ದಾಗಿ ವಸತಿ ಗೃಹಗಳಲ್ಲೇ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಹಳಿಯಾದ ರೆಸಾರ್ಟ್ ವೊಂದರಲ್ಲಿ ನಡೆದ ದಾಳಿಯ ವೇಳೆ ರೂಮಿನಲ್ಲಿ ಸಾವಿರಕ್ಕೂ ಹೆಚ್ಚು ಕಾಂಡೋಮ್ ಪೊಟ್ಟಣಗಳು ದೊರೆತಿವೆ.

ಗಿರಾಕಿಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ
ಇನ್ನು ಕೆಲವು ವಸತಿ ಗೃಹಗಳಲ್ಲಿ ರೂಮ್ ಬುಕಿಂಗ್ ವೇಳೆಯೇ ಈ ಬಗ್ಗೆ ವಿಚಾರಿಸುವ ಗ್ರಾಹಕರಿಗೆ, ವಸತಿ ಗೃಹಗಳ ಸಿಬ್ಬಂದಿಯೇ ಸ್ಥಳೀಯವಾಗಿ ಇಂಥ ದಂಧೆಯಲ್ಲಿ ತೊಡಗಿಕೊಂಡರುವವರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.
'ಗಿರಾಕಿ'ಗಳನ್ನು ಕರೆಯಲು ಈ ದಂಧೆಕೋರರು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ವಾಟ್ಸಪ್ ಹಾಗೂ ಟೆಲಿಗ್ರಾಮ್ ಬಳಕೆ ಹೆಚ್ಚು ಮಾಡುತ್ತಿದ್ದಾರೆ. ಟೆಲಿಗ್ರಾಮ್ ಗಳಲ್ಲಿ ಚಾನೆಲ್ ರಚಿಸಿಕೊಂಡು ಯುವತಿಯರು, ಮಹಿಳೆಯರ ಫೋಟೊ ಹಾಗೂ ದರವನ್ನು ಹಂಚಿಕೊಳ್ಳಲಾಗುತ್ತಿದ್ದು, ಇಷ್ಟವಾಗುವ ಮಹಿಳೆ, ಯುವತಿಯರನ್ನು ಗಿರಾಕಿ ಹೇಳಿದ ಸ್ಥಳಗಳಿಗೂ ಕಳುಹಿಸಿಕೊಡುತ್ತಾರೆ.

"ಆನ್ಲೈನ್ ಸೆಕ್ಸ್" ದಂಧೆಯೂ ಜೋರು
ವಾಟ್ಸಪ್ ನಲ್ಲಿ ಕೂಡ ಇದೇ ರೀತಿ ವ್ಯವಹಾರ ನಡೆಯುತ್ತಿದೆ. ಇದರ ಜತೆಗೆ, ಪೇಯ್ಡ್ ವಿಡಿಯೋ ಕಾಲ್ ಗಳ ದಂಧೆಯೂ ಜೋರಾಗಿದೆ. ಒಂದು ವಿಡಿಯೋ ಕಾಲ್ ಗೆ ಇಂತಿಷ್ಟು ಎಂದು ನಿಗದಿ ಪಡಿಸುವ ದಂಧಾಕೋರರು, ಗಿರಾಕಿಗಳಿಂದ ಆನ್ಲೈನ್ ಪೇಮೆಂಟ್ ಮಾಡಿಸಿಕೊಳ್ಳುತ್ತಾರೆ. ಬಳಿಕ ವಿಡಿಯೋ ಕಾಲ್ ಗಳಲ್ಲಿ ತಮ್ಮ ಮೈಮಾಟ ಪ್ರದರ್ಶಿಸಿ 'ಆನ್ಲೈನ್ ಸೆಕ್ಸ್' ದಂಧೆಯನ್ನೂ ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆ ಈವರೆಗೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿರುವುದು ಅತಿ ವಿರಳ. ಇತ್ತೀಚೆಗೆ ಇಂಥ ಎರಡು ದಾಳಿಗಳು ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಈ ಬಗ್ಗೆ ದಂಧಾಕೋರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಎಸ್ ಪಿ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ದಂಧೆಯ ಪ್ರಮಾಣ ಕಡಿಮೆಯಾಗಬಹುದು ಎನ್ನುವುದು ಜಿಲ್ಲೆಯ ನಾಗರಿಕರ ಅಭಿಪ್ರಾಯ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications