ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಾಣು ಹೆಚ್ಚುವ ಸಾಧ್ಯತೆ; ಕಿಮ್ಸ್ ‌ನಲ್ಲಿ ಮತ್ತೆ 100 ಹಾಸಿಗೆಗಳ ಕೋವಿಡ್- 19 ವಾರ್ಡ್

|
Google Oneindia Kannada News

ಕಾರವಾರ, ಜೂನ್ 12: ತುರ್ತಾಗಿ ಅತಿ ಕಡಿಮೆ ಅವಧಿಯಲ್ಲಿ ಕೋವಿಡ್- 19 ವಾರ್ಡ್ ಸ್ಥಾಪಿಸಿ ಕೊರೊನಾ ಸೋಂಕಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ಕೊಡಿಸಿ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕಿಮ್ಸ್) ಎರಡನೇ ಹಂತವಾಗಿ ಮತ್ತೆ 100 ಹಾಸಿಗೆಗಳ ಕೋವಿಡ್- 19 ವಾರ್ಡ್ ಸಜ್ಜುಗೊಳ್ಳುತ್ತಿದೆ.

Recommended Video

Indian stands 4th in the world in corona cases count | Oneindia Kannada

ಮೊದಲ ಬಾರಿಗೆ ಭಟ್ಕಳದಲ್ಲಿ 11 ಸೋಂಕಿತರು ಪತ್ತೆಯಾದಾಗ ಇಬ್ಬರಿಗೆ ಮಂಗಳೂರು ಹಾಗೂ ಉಡುಪಿಯಲ್ಲಿ ಚಿಕಿತ್ಸೆ ಕೊಡಿಸಿದರೆ, ಒಂಬತ್ತು ಮಂದಿಯನ್ನು ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ನೌಕಾ ಆಸ್ಪತ್ರೆ ಪತಂಜಲಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಜಿಲ್ಲೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ನೌಕಾ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಜಂಟಿಯಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಿ, ಎಲ್ಲರನ್ನೂ ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದರು. ದೇಶದಲ್ಲೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆ ನೌಕಾ ಆಸ್ಪತ್ರೆಯನ್ನು ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ಸ್ಥಳೀಯ ನಾಗರಿಕರಿಗಾಗಿ ತುರ್ತು ಸಂದರ್ಭದ ಬಳಕೆಗೆ ನೀಡಿತ್ತು.

ಕಾರವಾರ; ಕೊರೊನಾ ಗೆದ್ದು, ಮೂರ್ಛೆ ರೋಗದಿಂದಲೂ ಪಾರಾದ 5 ತಿಂಗಳ ಮಗು<br>ಕಾರವಾರ; ಕೊರೊನಾ ಗೆದ್ದು, ಮೂರ್ಛೆ ರೋಗದಿಂದಲೂ ಪಾರಾದ 5 ತಿಂಗಳ ಮಗು

Possibility Of Corona Virus Spread 100 Beds Covid 19 Ward Built Again In Krims Karwar

 ಕೋವಿಡ್ ವಾರ್ಡ್ ಆಗಿ ಮಾರ್ಪಾಟ್ಟ ಕಿಮ್ಸ್ ವಾಹನ ನಿಲುಗಡೆ ಜಾಗ

ಕೋವಿಡ್ ವಾರ್ಡ್ ಆಗಿ ಮಾರ್ಪಾಟ್ಟ ಕಿಮ್ಸ್ ವಾಹನ ನಿಲುಗಡೆ ಜಾಗ

ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಲೇ ಜಿಲ್ಲಾಡಳಿತದ ಮುಂದಾಲೋಚನೆಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೋವಿಡ್- 19 ವಾರ್ಡ್ ಸಿದ್ಧಪಡಿಸಿತ್ತು. ಕೊರೊನಾ ಸೋಂಕಿತರಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲೇ ಚಿಕಿತ್ಸೆ ನೀಡುವ ಉದ್ದೇಶದಿಂದ ಕಿಮ್ಸ್ ನಲ್ಲಿ 300 ಬೆಡ್ ಗಳ ವಾರ್ಡ್ ಅನ್ನು ಅತಿ ಕಡಿಮೆ ಅವಧಿಯಲ್ಲಿ ಸಿದ್ಧಗೊಳಿಸಲಾಗಿತ್ತು. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಲಿಟಿ) ಅನುದಾನದಡಿಯಲ್ಲಿ ಕಿಮ್ಸ್ ನ ವಾಹನ ನಿಲುಗಡೆ ಜಾಗವನ್ನೇ ಕೋವಿಡ್- 19 ವಾರ್ಡ್ ಆಗಿ ಮಾರ್ಪಾಟು ಮಾಡಲಾಗಿದ್ದು, ಈ ವಾರ್ಡ್‍ನಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೋಣೆಗಳು, ಐಸಿಯು, ವೆಂಟಿಲೇಟರ್ ಹಾಗೂ ಸೋಂಕಿನ ಲಕ್ಷಣ ಆಧರಿಸಿ ವಿವಿಧ ವಾರ್ಡ್‍ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

 87 ಸೋಂಕಿತರು ಗುಣಮುಖ

87 ಸೋಂಕಿತರು ಗುಣಮುಖ

ಮೊದಲ ಹಂತದಲ್ಲಿ ದುಬೈನಿಂದ ವಾಪಸ್ಸಾದವರಲ್ಲಿ ಸೋಂಕು ಪತ್ತೆಯಾಗಿ ಸೋಂಕಿತರ ಸಂಖ್ಯೆ 11 ಮಂದಿಗಿಂತ ಹೆಚ್ಚಿಗೆ ಹರಡದಂತೆ ಜಿಲ್ಲಾಡಳಿತ ನೋಡಿಕೊಂಡಿತ್ತು. ಆದರೆ, ವೈದ್ಯಕೀಯ ಕಾರಣಕ್ಕಾಗಿ ಮಂಗಳೂರಿಗೆ ಹೋಗಿ ಬಂದವರಿಂದಾಗಿ ಮತ್ತೆ ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಾಗಲು ಶುರುವಾಗಿತ್ತು. ಇದರ ಜೊತೆಗೆ, ಹೊರ ರಾಜ್ಯಗಳಿಲ್ಲದ್ದವರಿಗೆ ತವರಿಗೆ ಬರಲು ಸರ್ಕಾರ ಅವಕಾಶ ನೀಡಿದ ಫಲವಾಗಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು ಆರಂಭಿಸಿತು. ಆದರೂ, ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಸಿದ್ಧಗೊಂಡ ಕಿಮ್ಸ್ ನ ವಾರ್ಡ್ ‍ನಲ್ಲಿ ಈಗಾಗಲೇ 87 ಸೋಂಕಿತರನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಪರಿಶ್ರಮದ ಫಲವಾಗಿ ಗುರುವಾರ ಸಂಜೆಯವರೆಗೆ 73 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಕ್ಕಿಮ್ಸ್ ನ ಈ ವಾರ್ಡ್‍ನಲ್ಲಿ 14 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

 ವೈರಾಣು ಜ್ವರ ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ

ವೈರಾಣು ಜ್ವರ ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ

ಸಕ್ರಿಯ ಸೋಂಕಿತರ ಸಂಖ್ಯೆ ಈಗ ಕಡಿಮೆ ಇದೆ. ಆದರೆ, ದಿನ ಬಿಟ್ಟು ದಿನಕ್ಕೆ ಒಂದೊಂದೇ ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮನೆಗೆ ತೆರಳಿದವರಲ್ಲಿ ಸೋಂಕು ದೃಢಪಡುತ್ತಿದೆ. ಜತೆಗೆ, ಅನ್ಯ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಬರುವವರ ಸಂಖ್ಯೆ ಕೂಡ ಈಗ ಹೆಚ್ಚಾಗ ತೊಡಗಿದೆ. ಮತ್ತೊಂದೆಡೆ ಮಳೆಗಾಲ ಕೂಡ ಆರಂಭವಾಗಿದ್ದು, ವೈರಾಣು ಜ್ವರ ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್- 19 ಎರಡನೇ ಹಂತದ ವಾರ್ಡ್ ಅನ್ನು ಸಿದ್ಧಪಡಿಸಲು ಜಿಲ್ಲಾಡಳಿತ ಹೆಜ್ಜೆ ಇಟ್ಟಿದೆ.

 ಸಂಗ್ರಹಾಗಾರ ಈಗ ಕೋವಿಡ್ ವಾರ್ಡ್

ಸಂಗ್ರಹಾಗಾರ ಈಗ ಕೋವಿಡ್ ವಾರ್ಡ್

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರು ಈ ವಾರ್ಡ್‍ಗಳ ಜವಾಬ್ದಾರಿ ವಹಿಸಿಕೊಂಡು, ತಮ್ಮ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇರುವ ಕೋವಿಡ್- 19 ವಾರ್ಡ್‍ನಲ್ಲಿ ನೀಡಲಾದ ಸೌಲಭ್ಯಗಳನ್ನೇ ಎರಡನೇ ಹಂತದ ವಾರ್ಡ್‍ಗೂ ನೀಡಲಾಗಿದೆ. ಆದರೆ, ಇಲ್ಲಿ ಹಾಸಿಗೆಗಳನ್ನು 100ಕ್ಕೆ ಸೀಮಿತಗೊಳಿಸಲಾಗಿದೆ. ಕಿಮ್ಸ್ ನ ಹಿಂಭಾಗದಲ್ಲಿರುವ ಔಷಧಿ ಸಾಮಗ್ರಿಗಳ ಹಳೆಯ ಸಂಗ್ರಹಾಗಾರಕ್ಕೇ ಈಗ ಕೋವಿಡ್- 19 ಎರಡನೇ ಹಂತದ ವಾರ್ಡ್‍ನ ರೂಪ ನೀಡಲಾಗಿದೆ. ಪ್ರಸ್ತುತ ಇರುವ ವಾರ್ಡ್‍ನ ಪಕ್ಕದಲ್ಲೇ ಈ ನೂತನ ವಾರ್ಡ್ ಇದೆ. ಒಟ್ಟಾರೆಯಾಗಿ, ರಾಜ್ಯದಲ್ಲೇ ವ್ಯವಸ್ಥಿತವಾಗಿ ಕೊರೊನಾ ಸೋಂಕು ತಡೆಗಾಗಿ ಹೆಜ್ಜೆ ಇಡುವ ಮೂಲಕ ಉತ್ತರ ಕನ್ನಡ ಜಿಲ್ಲಾಡಳಿತ ಮಾದರಿಯಾಗಿದ್ದು, ಜನರು ಕೂಡ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕಾಗಿದೆ.

English summary
Karwar institute of medical sciences is again building 100 beds covid 19 ward as precautionary to the possibility of corona virus spread,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X