ಮಹಾ ಶಿವರಾತ್ರಿ 2023: ಯಾಣದಲ್ಲಿ ಶಿವರಾತ್ರಿಗೆ ವಿಶೇಷ ಪೂಜೆ: ಈ ಸ್ಥಳದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
ಬೃಹದಾಕಾರದ ಎರಡು ಕಲ್ಲಿನ ಶಿಲೆಗಳಿಂದ ಕೂಡಿರುವ ಯಾಣ ವಿಶ್ವ ಪ್ರಸಿದ್ದ ಪ್ರವಾಸಿ ತಾಣ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಈ ಯಾಣ ಕ್ಷೇತ್ರಕ್ಕೆ ಪ್ರತಿನಿತ್ಯ ದೇಶ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸ್ಥಳದ ವಿಶೇಷತೆ ಬಗ
ಕಾರವಾರ, ಫೆಬ್ರವರಿ 15: ಬೃಹದಾಕಾರದ ಎರಡು ಕಲ್ಲಿನ ಶಿಲೆಗಳಿಂದ ಕೂಡಿರುವ ಯಾಣ ವಿಶ್ವ ಪ್ರಸಿದ್ದ ಪ್ರವಾಸಿ ತಾಣ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಈ ಯಾಣ ಕ್ಷೇತ್ರಕ್ಕೆ ಪ್ರತಿನಿತ್ಯ ದೇಶ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಚ್ಚ ಹಸಿರಿನ ಕಾನನದ ನಡುವೆ ಬೃಹತ್ ಆಕಾರದ ತಲೆ ಎತ್ತಿರುವ ಕಪ್ಪು ಕಲ್ಲಿನ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರಗಳು ಪ್ರಮುಖ ಆಕರ್ಷಣೆಯಾಗಿದೆ.
ಇನ್ನು ಭೈರವೇಶ್ವರ ಶಿಖರವು 120 ಮೀಟರ್(390ಅಡಿ) ಎತ್ತರವಿದೆ. ಮೋಹಿನಿ ಶಿಖರವು 60 ಮೀಟರ್ (300ಅಡಿ) ಎತ್ತರವಿದೆ. ದೊಡ್ಡದಾದ ಬೈರವೇಶ್ವರ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ.
ಇನ್ನು ಈ ಸ್ಥಳಕ್ಕೆ ಪೌರಾಣಿಕ ಇತಿಹಾಸ ಕೂಡ ಇದ್ದು, ಈಶ್ವರನಿಂದ ಉರಿಹಸ್ತದ ವರ ಪಡೆದ ಭಸ್ಮಾಸುರ ಈಶ್ವರನ ಮೇಲೆ ಪ್ರಯೋಗ ಮಾಡಲು ಮುಂದಾದಾಗ ಶಿವ ತಪ್ಪಿಸಿಕೊಂಡು ರಕ್ಷಣೆಗಾಗಿ ಮಹಾವಿಷ್ಣುವನ್ನು ಕೇಳಿಕೊಂಡನಂತೆ. ಅದರಂತೆ ಇದಕ್ಕೆ ಒಪ್ಪಿದ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವ ಇದೇ ಸ್ಥಳದಲ್ಲಿ ಭಸ್ಮವಾಗುವಂತೆ ಮಾಡಿದ್ದಾನೆ. ಈ ಕಾರಣದಿಂದ ಇಂದಿಗೂ ಬೃಹತ್ ಶಿಲೆಯನ್ನು ಭೈರವೇಶ್ವರ ಶಿಲೆ ಎಂದು, ಮತ್ತೊಂದು ಶಿಲಿಯನ್ನು ಮೋಹಿನಿ ಶಿಲೆಯೆಂದು ನಂಬಲಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಇಂದಿಗೂ ಸುಟ್ಟ ರೀತಿಯ ಮಣ್ಣು ಬೂದಿ ಪತ್ತೆಯಾಗುತ್ತದೆ.

ಇನ್ನು ಮಹಾಶಿವರಾತ್ರಿ ದಿನ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದುಬರುತ್ತದೆ. ಯಾಣದವರೆಗೂ ತೆರಳಲು ರಸ್ತೆ ಸೌಕರ್ಯ ಕೂಡ ಇದೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಶಿವರಾತ್ರಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಇದಲ್ಲದೆ ಶಾಲಾ ಕಾಲೇಜು ಪ್ರವಾಸಿಗರು ಬರುವವರು ನವೆಂಬರ್ ನಿಂದ ಜನವರಿವರೆಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಉಂಬಳದ ಕಾಟ ಇದೆ. ಪ್ರತಿ ವರ್ಷ ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದು ಹೋಗುತ್ತಾರೆ.

ಇನ್ನು ಯಾಣ ಕ್ಷೇತ್ರವೂ ಕುಮಟಾದಿಂದ 31 ಕಿ.ಮೀ. ಶಿರಸಿಯಿಂದ 45 ಕಿ.ಮೀ. ಅಂಕೋಲಾದಿಂದ 56 ಕಿ.ಮೀ ದೂರದಲ್ಲಿದೆ. ಬಸ್ ಅಥವಾ ರೈಲ್ವೆ ವ್ಯವಸ್ಥೆ ಇಲ್ಲ. ಇಲ್ಲಿಗೆ ತೆರಳುವವರು ಖಾಸಗಿ ವಾಹನದಲ್ಲಿ ತೆರಳಬೇಕು. ಅಲ್ಲದೆ ಸುಮಾರು 3 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು. ದೇವಸ್ಥಾನದ ಬಳಿ ತಿಂಡಿ ತಿನ್ನಿಸು ಹಾಗೂ ತಂಪು ಪಾನಿಯ ಅಂಗಡಿ ಬಿಟ್ಟರೇ ಬೇರೆನು ಸಿಗುವುದಿಲ್ಲ. ಊಟ, ವಸತಿಗೆ ಕುಮಟಾ ಇಲ್ಲವೇ ಶಿರಸಿಗೆ ತೆರಳಬೇಕು. ದೇವಸ್ಥಾನದ ಬಳಿಗೆ ಚಿಕ್ಕ ಮಳಿಗೆಯೊಂದಿದ್ದು, ದೇವರ ಪೋಟೊ, ಶಿಖರಗಳ ಪೋಟೊ ಇನ್ನಿತರ ವಸ್ತುಗಳು ಪ್ರಸಾದ ದೊರೆಯುತ್ತದೆ.












Click it and Unblock the Notifications