ಕಿರಿಕಿರಿ ಎಂದು ಅಕ್ಕನ ಮಗಳನ್ನೇ ಉರುಳಿ ಹಾಕಿ ಕೊಂದ ಚಿಕ್ಕಮ್ಮ

ಉತ್ತರ ಕನ್ನಡ, ಏಪ್ರಿಲ್ 09: ಅಕ್ಕನ ಮಗಳನ್ನು ಸಾಕುವುದು ಕಿರಿಕಿರಿ ಎಂದು ಆಕೆಯನ್ನು ಸೀರೆಯಿಂದ ಉರುಳು ಹಾಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ತೇರಗಾಂವದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಿಂಗ ನೆಲ್ಲುಡಿಯ ಪತ್ನಿ 4 ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಆಕೆಯ 5 ವರ್ಷದ ಮಗಳನ್ನು ಸೋಮನಿಂಗನ ಹೆಂಡತಿಯ ತಂಗಿ ಸಾವಿತ್ರಿ ಎಂಬಾಕೆ ತನ್ನೊಂದಿಗೆ ತೇರಗಾಂವದ ಮನೆಗೆ ಕರೆದುಕೊಂಡು ಬಂದು ಸಾಕಿಕೊಂಡಿದ್ದಳು.

Girl Murdered In Teragav Of Uttara Kannada District

ಈಕೆಗೆ ಐದು ವರ್ಷದ ಹಾಗೂ ಮೂರು ವರ್ಷದ ಗಂಡು ಮಕ್ಕಳಿದ್ದಾರೆ. ಅವರೊಂದಿಗೆ ಈ ಹುಡುಗಿಯನ್ನೂ ಸಾಕುವುದು ಕಿರಿಕಿರಿ ಎಂಬ ಕಾರಣಕ್ಕೆ ಸೀರೆಯಿಂದ ಕೊರಳಿಗೆ ಉರುಳು ಹಾಕಿ ಕೊಲೆ ಮಾಡಿದ್ದಾಳೆ. ಸಾವಿತ್ರಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+