ಶಿರಸಿಯಲ್ಲಿ ಮತದಾನ ಮುಗಿಯುತ್ತಿದ್ದಂತೆಯೇ ಗಲಾಟೆ:ಓರ್ವನ ಕೊಲೆ
ಶಿರಸಿ, ಏಪ್ರಿಲ್ 24: ಲೋಕಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಮಂಗಳವಾರ (ಏ.23)ರಾತ್ರಿ ಪಟ್ಟಣದಲ್ಲಿ ಒಂದೇ ಕೋಮಿನ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ನಡೆದ ಸ್ಥಳದಲ್ಲೇ ವ್ಯಕ್ತಿಯೊಬ್ಬನ ಮೃತ ದೇಹ ಬುಧವಾರ ಪತ್ತೆಯಾಗಿದೆ.
ಶಿರಸಿಯ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಅಸ್ಸಲಾಂ ಬಾಬಾಜಾನ್ (22) ಎಂಬುವವನು ಕೊಲೆಯಾಗಿರುವವನು.

ಮಂಗಳವಾರ (ಏ.23)ರಾತ್ರಿ ಒಂದೇ ಕೋಮಿನ ಎರಡು ಗುಂಪುಗಳು ಕಸ್ತೂರಬಾ ನಗರದಲ್ಲಿ ಗಲಾಟೆ ಮಾಡಿಕೊಂಡಿವೆ. ಈ ವೇಳೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅನೀಫ್ ತಹಸೀಲ್ದಾರ್ ಗೆ ಚಾಕು ಇರಿಯಲಾಗಿತ್ತು. ತಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಹಬದಿಗೆ ತಂದಿದ್ದರು. ಚಾಕುವಿಂದ ಇರಿತಗೊಂಡ ಅನೀಫ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

ಆದರೆ, ಈ ಗಲಾಟೆ ನಡೆದ ಸ್ಥಳದಲ್ಲೇ ಇಂದು ಬುಧವಾರ ಬೆಳಗ್ಗೆ ಅಸ್ಸಲಾಂ ಎಂಬಾತನ ಮೃತ ದೇಹ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಗೆ ರಾಡ್ ನಿಂದ ಹೊಡೆದು, ಇರಿಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ.ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications