• search

ಜಮೀರ್ ಅಹಮದ್ ಸಿದ್ದರಾಮಯ್ಯ ಕಾರಿಗೆ ಬೇಡಿಕೆ ಇಟ್ಟಿದ್ದೇಕೆ?

By Gururaj
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಸಿದ್ದರಾಮಯ್ಯನವರ ಕಾರಿಗೆ ಬೇಡಿಕೆ ಇತ್ತ ಜಮೀರ್ ಅಹ್ಮದ್ ಖಾನ್ | Oneindia Kannada

    ಬೆಂಗಳೂರು, ಜೂನ್ 21 : 'ನನಗೆ ದೊಡ್ಡ ಗಾಡಿಯಲ್ಲಿ ಓಡಾಡಿ ಅಭ್ಯಾಸ. ಫಾರ್ಚೂನರ್‌ ಕಾರಿನಲ್ಲಿ ಚೆನ್ನಾಗಿರೋದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರು ಮಾತ್ರ. ಅದಕ್ಕಾಗಿ ನಾನು ಆ ಕಾರನ್ನು ಕೇಳಿದ್ದೇನೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

    'ಇನ್ನೋವಾ ಕಾರು ಬೇಡ ಟೊಯೋಟಾ ಫಾರ್ಚೂನರ್ ಕಾರು ಬೇಕು' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಬೇಡಿಕೆ ಇಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಬಳಸುತ್ತಿದ್ದ ಕಾರನ್ನೇ ನೀಡಿ ಎಂದು ಅವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

    ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಂ 01, ಜಿ 5734 ನಂಬರ್‌ನ ಟೊಯೋಟಾ ಫಾರ್ಚೂನರ್ ಕಾರು ಬಳಸುತ್ತಿದ್ದರು. ಈಗ ಜಮೀರ್ ಅಹಮದ್ ಖಾನ್ ನನಗೆ ಅದೇ ಕಾರು ಬೇಕು ಎಂದು ಬೇಡಿಕೆ ಇಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಜಮೀರ್ ಅಹಮದ್ ಖಾನ್ ಇಟ್ಟಿರುವ ಬೇಡಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಇನ್ನೂ ಸಿಕ್ಕಿಲ್ಲ. ಸ್ವತಃ ಕುಮಾರಸ್ವಾಮಿ ಅವರು ಸರ್ಕಾರಿ ಕಾರು ಬಳಸದೇ ಕಪ್ಪು ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಜಮೀರ್ ಅಹಮದ್ ಖಾನ್ ಬೇಡಿಕೆಗಳ ವಿವರ ಇಲ್ಲಿದೆ ನೋಡಿ...

    ಜಮೀರ್ ಅಹಮದ್ ಖಾನ್ ಬೇಡಿಕೆ

    ಜಮೀರ್ ಅಹಮದ್ ಖಾನ್ ಬೇಡಿಕೆ

    ಬೆಂಗಳೂರಿನ ಚಾಮರಾಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಇನ್ನೋವಾ ಕಾರನ್ನು ನೀಡಿದೆ.

    ಆದರೆ, ಜಮೀರ್ ಅಹಮದ್ ಖಾನ್ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಎಂ 01, ಜಿ 5734 ನಂಬರ್‌ನ ಟೊಯೋಟಾ ಫಾರ್ಚೂನರ್ ಕಾರನ್ನು ನನಗೆ ಕೊಡಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

    ಬೇಡಿಕೆಗೆ ಸಮರ್ಥನೆ

    ಬೇಡಿಕೆಗೆ ಸಮರ್ಥನೆ

    ತಮ್ಮ ಬೇಡಿಕೆ ಬಗ್ಗೆ ಜಮೀರ್ ಅಹಮದ್ ಖಾನ್ ಸಮರ್ಥನೆ ನೀಡಿದ್ದಾರೆ. 'ದೊಡ್ಡ ಗಾಡಿಯಲ್ಲಿ ಓಡಾಡಿದ್ರೆ ನಾನು ಮಂತ್ರಿ ಅನ್ನೋದು ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರು ಬಹಳ ಪಾಪ್ಯುಲರ್, ಅದಕ್ಕೆ ಅವರಿನ್ನೂ ಸರ್ಕಾರಿ ಕಾರು ಬಳಸುತ್ತಿಲ್ಲ. ನನ್ನನ್ನು ಯಾರು ಗುರುತಿಸುತ್ತಾರೆ. ಅದಕ್ಕೆ ದೊಡ್ಡ ಗಾಡಿಯಲ್ಲಿ ಓಡಾಡಿದರೆ ತಾನೇ ಜನರಿಗೆ ಗೊತ್ತಾಗೋದು?' ಎಂದು ಜಮೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಆ ಕಾರು ಚೆನ್ನಾಗಿದೆ

    ಆ ಕಾರು ಚೆನ್ನಾಗಿದೆ

    'ನಾನು ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಎಂ 01, ಜಿ 5734 ನಂಬರ್‌ನ ಟೊಯೋಟಾ ಫಾರ್ಚೂನರ್ ಕಾರಿಗಾಗಿ ಬೇಡಿಕೆ ಇಟ್ಟಿರುವುದು ನಿಜ. ನನಗೆ ದೊಡ್ಡಗಾಡಿಯಲ್ಲಿ ಓಡಾಡಿ ಅಭ್ಯಾಸ. ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಸಿದ್ದರಾಮಯ್ಯ ಬಳಸುತ್ತಿದ್ದ ಕಾರು ಚೆನ್ನಾಗಿದೆ. ಅದಕ್ಕಾಗಿ ಅದನ್ನು ನೀಡಿ ಎಂದು ಕೇಳಿದ್ದೇನೆ. ಆ ಕಾರು ಲಕ್ಕಿ ಅಂತೇನಿಲ್ಲ' ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

    ಅದೇ ಕಾರು ಬೇಕು

    ಅದೇ ಕಾರು ಬೇಕು

    ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ 'ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರು ಅಂದ್ರೆ ನನಗಿಷ್ಟ. ಸಿದ್ದರಾಮಯ್ಯ ಅಂದ್ರೆ ನನಗಿಷ್ಟ. ಅವರ ಕಾರನ್ನೇ ಕೊಡಿ' ಎಂದು ಮೊದಲು ಹೇಳಿದ್ದರು.

    ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಸಚಿವರು ಪತ್ರ ಬರೆದಿದ್ದು ಹೌದು. ಆದರೆ, ಆ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕೆ ಒಪ್ಪಿಗೆ ಕೊಟ್ಟಿಲ್ಲ ಎಂದು ತಿಳಿದುಬಂದಿದೆ.

    ಕುಮಾರಸ್ವಾಮಿ ಸರ್ಕಾರಿ ಕಾರು ಬಳಸಲ್ಲ

    ಕುಮಾರಸ್ವಾಮಿ ಸರ್ಕಾರಿ ಕಾರು ಬಳಸಲ್ಲ

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಕಾರನ್ನು ಬಳಕೆ ಮಾಡುತ್ತಿಲ್ಲ. ರೇಂಜ್ ರೋವರ್ ಕಾರಿನಲ್ಲಿಯೇ ಅವರು ಪ್ರಯಾಣ ಮಾಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕುಮಾರಸ್ವಾಮಿ ಕಪ್ಪು ಬಣ್ಣದ ರೇಂಜ್ ರೋವರ್ ಬಳಸುತ್ತಿದ್ದಾರೆ.

    ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟೊಯೋಟಾ ಫಾರ್ಚುನರ್ ಕಾರನ್ನು ನೀಡಿತ್ತು. ಆದರೆ, ಕುಮಾರಸ್ವಾಮಿ ಅವರು ಸದ್ಯಕ್ಕೆ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka food and civil supplies department minister Zameer Ahmed Khan demanded for Toyota Fortuner car used by Former Chief Minister Siddaramaiah. The Department of Personnel and Administrative Reforms (DPAR) allotted Toyota Innova car for minister.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more