Express Train: ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ, 6 ರೈಲುಗಳ ಮಾರ್ಗ ಬದಲಾವಣೆ

ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆಯು ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಸಂಚರಿಸುವ ರೈಲನ್ನು ತಾಳಗುಪ್ಪವರೆಗೆ ವಿಸ್ತರಣೆ ಮಾಡಲಾಗಿದೆ. ಈ ತಾತ್ಕಾಲಿಕ ವಿಸ್ತರಣಾ ಸೇವೆಯು ಅಕ್ಟೋಬರ್ 18ರಿಂದ ನವೆಂಬರ್ 12ರ ಜಾರಿಯಲ್ಲಿರಲಿದೆ. ಇದರೊಂದಿಗೆ ಕೆಲವು ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿಯಿಂದ ಶಿವಮೊಗ್ಗಕ್ಕೆ ವಾರಕ್ಕೆ ಮೂರು ಬಾರಿ (Tri-Weekly) ಓಡುವ ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳನ್ನು (16581/16582) ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲು ನಿರ್ಧರಿಸಲಾಗಿದೆ. ಪ್ರತಿಯೊಂದು ದಿಕ್ಕಿನಲ್ಲಿಯೂ ಒಟ್ಟು 11 ಟ್ರಿಪ್‌ಗಳ ಸೇವೆ ಪಡೆಯಬಹುದು. ರೈಲಿನ ಸಂಯೋಜನೆ (ಬೋಗಿಗಳ ಸಂಖ್ಯೆ ಮತ್ತು ವಿಧ) ಹಾಗೂ ಸಂಚರಿಸುವ ದಿನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಹೇಳಿದೆ.

Yeshwanthpur-Shivamogga Express

ಯಶವಂತಪುರ-ಶಿವಮೊಗ್ಗ ಟೌನ್ ರೈಲು ವೇಳಾಪಟ್ಟಿ

* ಯಶವಂತಪುರ-ಶಿವಮೊಗ್ಗ ಟೌನ್ ರೈಲು (16581) ಯಶವಂತಪುರದಿಂದ ರಾತ್ರಿ 00:15 ಗಂಟೆಗೆ ಹೊರಡುತ್ತದೆ. ಅದೇ ದಿನ ಬೆಳಗ್ಗೆ 09 ಗಂಟೆಗೆ ತಾಳಗುಪ್ಪ ನಿಲ್ದಾಣವನ್ನು ತಲುಪುತ್ತದೆ.

* ಮರಳಿ ಅದೇ ದಿಕ್ಕಿನಲ್ಲಿ ಶಿವಮೊಗ್ಗ ಟೌನ್-ಯಶವಂತಪುರ ರೈಲು (16582) ತಾಳಗುಪ್ಪದಿಂದ ರಾತ್ರಿ 22 ಗಂಟೆಗೆ ಹೊರಟು, ಮಾರನೇ ದಿನ ಯಶವಂತಪುರವನ್ನು ಅದರ ನಿಗದಿತ ಸಮಯಕ್ಕೆ ತಲುಪುತ್ತದೆ.

ರೈಲುಗಳ ಮಾರ್ಗ, ನಿಲುಗಡೆ ನಿಲ್ದಾಣಗಳು

ರೈಲು ಎರಡೂ ದಿಕ್ಕುಗಳಲ್ಲಿ ಯಶವಂತಪುರ-ಶಿವಮೊಗ್ಗ ರೈಲು ಕೋನಗವಳ್ಳಿ, ಹರ್ನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲು, ಆನಂದಪುರಂ, ಅಡ್ಡೆರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಡುವಿನ ರೈಲು ಸಮಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರ್ಗ ಬದಲಾವಣೆಯಾದ ರೈಲುಗಳ ಪಟ್ಟಿ

ಬೆಂಗಳೂರು ವಿಭಾಗದ ಪೆನುಕೊಂಡ-ನಾಗಸಮುದ್ರಂ-ಧರ್ಮಾವರಂ ವಿಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಹಳಿ 'ಡಬ್ಲಿಂಗ್' (ಹಳಿ ದ್ವಿಗುಣಗೊಳಿಸುವ) ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಧರ್ಮಾವರಂ ಮಾರ್ಗದ ಬದಲಾಗಿ, ಪೆನುಕೊಂಡ-ನಾಗಸಮುದ್ರಂ-ಧರ್ಮಾವರಂ ಮಾರ್ಗದ ಮೂಲಕ ಸಂಚರಿಸಲಿವೆ. ಈ ಬದಲಾವಣೆಯು ಅಕ್ಟೋಬರ್ 16ರಿಂದ ಜಾರಿಗೆ ಬರಲಿದೆ.

* ಯಶವಂತಪುರ-ಪುರಿ ವಾರಕ್ಕೊಮ್ಮೆ ಸಂಚರಿಸುವ 'ಗರೀಬ್ ರಥ್' ಎಕ್ಸ್‌ಪ್ರೆಸ್ ರೈಲು (22884)

* ಯಶವಂತಪುರ-ಲಕ್ನೋ ವಾರಕ್ಕೊಮ್ಮೆ ಸಂಚರಿಸುವ 'ಸೂಪರ್‌ಫಾಸ್ಟ್' ಎಕ್ಸ್‌ಪ್ರೆಸ್ ರೈಲು (22683)

* ಯಶವಂತಪುರ-ಕೋರ್ಬಾ ದ್ವಿ-ಸಾಪ್ತಾಹಿಕ ವೈಗಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12251)

* ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (15024)

* ಕೊಯಮತ್ತೂರು-ಹಜರತ್ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12647)

* ಯಶವಂತಪುರ-ಬೀದರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16577)

* ಬೀದರ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16578)

* ಗ್ವಾಲಿಯರ್-ಎಸ್‌ಎಂವಿಟಿ (SMVT) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (11086)

* ಅಜ್ಮೇರ್-ಕೆಎಸ್‌ಆರ್ (KSR) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16531)

* ಜೋಧ್‌ಪುರ-ಕೆಎಸ್‌ಆರ್ (KSR) ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16533) ಮಾರ್ಗ ಬದಲಾವಣೆ ಆಗಿದೆ. ಆದರೆ ಎಂದಿನಂತೆ ಎಲ್ಲ ನಿಲ್ದಾನಗಳಲ್ಲಿ ನಿಲುಗಡೆ ನೀಡಲಾಗುತ್ತದೆ ಎಂದು ರೈಲ್ವೆ ವಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+