ಸಿಹಿಸುದ್ದಿ; ಯಶವಂತಪುರ-ಮುರುಡೇಶ್ವರ ರೈಲು ವಿಸ್ತರಣೆ

ಬೆಂಗಳೂರು, ಜೂನ್ 28; ಕರ್ನಾಟಕದ ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ವಾರಾಂತ್ಯದಲ್ಲಿ ಸಂಚಾರ ನಡೆಸುತ್ತಿದ್ದ ಯಶವಂತಪುರ-ಮುರುಡೇಶ್ವರ ನಡುವಿನ ವಿಶೇಷ ರೈಲು ಸ್ಥಗಿತಗೊಳಿಸುವ ತೀರ್ಮಾನಿಂದ ಇಲಾಖೆ ಹಿಂದೆ ಸರಿದಿದೆ. ಈ ರೈಲನ್ನು ಜುಲೈ ಅಂತ್ಯದ ತನಕ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.

ಭಾರತೀಯ ರೈಲ್ವೆ ರೈಲು ನಂಬರ್ 06563/ 06564 ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಇದರಿಂದಾಗಿ ಬೆಂಗಳೂರು ಮತ್ತು ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲು ಸಂಚಾರ ಸ್ಥಗಿತಗೊಳಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರೈಲು ಸ್ಥಗಿತಗೊಳಿಸಿದರೆ ಹೋರಾಟದ ಎಚ್ಚರಿಕೆ ನೀಡಲಾಗಿತ್ತು.

Yeshwanthpur Murdeshwar Train Extended Till July 2023 End

ಬೆಂಗಳೂರಿನ ಯಶವಂತಪುರ ಮತ್ತು ಮುರುಡೇಶ್ವರ ನಡುವೆ ಸಂಚಾರ ನಡೆಸುವ ರೈಲು ಸಂಪೂರ್ಣ ಭರ್ತಿಯಾಗುತ್ತಿದೆ. ಉತ್ತಮ ವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಸಹ ರೈಲು ಸೇವೆಯನ್ನು ಏಕೆ ಸ್ಥಗಿತಗೊಳಿಸಲಾಗುತ್ತಿದೆ? ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮತ್ತು ಸಮಾನ ಮನಸ್ಕ ಹೋರಾಟಗಾರರು ಪ್ರಶ್ನೆ ಮಾಡಿದ್ದರು.

ಹೆಚ್ಚುವರಿಯಾಗಿ ಸಂಚಾರ; ರೈಲು ನಂಬರ್ 06563 ಯಶವಂತಪುರ-ಮುರುಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಜುಲೈ ತಿಂಗಳಿನಲ್ಲಿ 1, 8, 15, 22 ಮತ್ತು 29ರಂದು ಸಂಚಾರ ನಡೆಸಲಿದೆ. ರೈಲು ನಂಬರ್ 06564 ಮರುಡೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿ ರವಿವಾರ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಶನಿವಾರ ರಾತ್ರಿ ಬೆಂಗಳೂರು ನಗರದಿಂದ ಹೊರಡುತ್ತಿದ್ದ ರೈಲು ಭಾನುವಾರ ರಾತ್ರಿ ಮರುಡೇಶ್ವರದಿಂದ ವಾಪಸ್ ಹೊರಟು ಬೆಂಗಳೂರು ತಲುಪುತ್ತದೆ. ಆದ್ದರಿಂದ ಬೆಂಗಳೂರು ಮತ್ತು ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಇದು ಸಹಕಾರಿಯಾಗಿದೆ. ಮಂಗಳೂರು, ಕುಂದಾಪುರ, ಉಡುಪಿ, ಬೈಂದೂರು ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಈ ರೈಲು ಸೇವೆ ಅನುಕೂಲ ಕಲ್ಪಿಸಿದೆ.

ಈ ರೈಲಿನ ಶೇ 100ರಷ್ಟು ಆಸನಗಳು ಸಹ ಭರ್ತಿ ಆಗುತ್ತಿದ್ದವು. ರೈಲು ಮಂಗಳೂರು ನಗರ ನಿಲ್ದಾಣಕ್ಕೆ ತೆರಳುತ್ತಿರಲಿಲ್ಲ ಪಡೀಲ್ ಬೈಪಾಸ್ ಮೂಲಕ ಸಾಗುವ ಕಾರಣ 1 ಗಂಟೆಗೂ ಹೆಚ್ಚು ಸಮಯ ಉಳಿತಾಯವಾಗುತ್ತಿತ್ತು ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈಗ ರೈಲು ಸೇವೆ ವಿಸ್ತರಣೆ ಮಾಡಿದ್ದಕ್ಕೆ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಮತ್ತೊಂದು ರೈಲು ಬೇಕು ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ಇಂತಹ ಸಮಯದಲ್ಲಿ ಯಶವಂತಪುರ-ಮುರುಡೇಶ್ವರ ರೈಲು ಸ್ಥಗಿತಗೊಳಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ರೈಲನ್ನು ಶುಕ್ರವಾರವೂ ಸಹ ಓಡಿಸಬೇಕು ಎಂದು ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಆದರೆ ರೈಲ್ವೆ ಇಲಾಖೆ ಈ ಕುರಿತು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಯಾಣಿಕರ ಬೇಡಿಕೆ; ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಮುರುಡೇಶ್ವರಕ್ಕೆ ವಿಶೇಷ ರೈಲು ಸೇವೆಯನ್ನು 2022ರಲ್ಲಿ ಆರಂಭಿಸಲಾಗಿತ್ತು. ಪ್ರತಿ ಶನಿವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಮುರುಡೇಶ್ವರದಿಂದ ಭಾನುವಾರ ಮಧ್ಯಾಹ್ನ ಹೊರಡುವ ರೈಲು ಬಂದ ಮಾರ್ಗದಲ್ಲಿಯೇ ವಾಪಸ್ ಆಗಿ ಮರುದಿನ ಬೆಳಿಗ್ಗೆ 4 ಗಂಟೆಗೆ ಯಶವಂತಪುರಕ್ಕೆ ತಲುಪಲಿದೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಆದರೆ ಇದನ್ನು ಖಾಯಂಗೊಳಿಸುವ ಕುರಿತು ಇಲಾಖೆ ಯಾವುದೇ ಆದೇಶವನ್ನು ಹೊರಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+