ವೈಲ್ಡ್ ಕರ್ನಾಟಕ ಕಿರುಚಿತ್ರ ನೋಡಿದ ಯಡಿಯೂರಪ್ಪ

ಬೆಂಗಳೂರು, ಜನವರಿ 28 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರವನ್ನು ವೀಕ್ಷಿಸಿದರು. ಕರ್ನಾಟಕದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ.

ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರ ವೀಕ್ಷಿಸಿದರು. ಅರಣ್ಯ ಸಚಿವ ಸಿ. ಸಿ. ಪಾಟೀಲ್, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ. ಭಾರತದ ಪ್ರಥಮ 4ಕೆ ಬ್ಲ್ಯೂ ಚಿಪ್‌ ಕಿರುಚಿತ್ರ ಎಂಬ ಹೆಗ್ಗಳಿಗೆ ವೈಲ್ಡ್‌ ಕರ್ನಾಟಕಕ್ಕಿದೆ.

Yediyurappa

ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ರಾಜ್ಯದ ಮೂಲೆ ಮೂಲೆ ತಿರುಗಾಡಿ ಅಪರೂಪದ ದೃಶ್ಯಾವಳಿಗಳನ್ನು ಸೆರೆ ಹಿಡಿದು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ಅಮೋಘವರ್ಷ, ಕಲ್ಯಾಣ ವರ್ಮ, ಶರತ್ ಚಂಪಾಟಿ 'ವೈಲ್ಡ್ ಕರ್ನಾಟಕ' ಕಿರುಚಿತ್ರದ ರೂವಾರಿಗಳು. ಕಿರುಚಿತ್ರದ ಟೀಸರ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಿರುಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು ಸುಮಾರು 2 ಕೋಟಿ ವೆಚ್ಚದ ದ್ರೋಣ್ ಬಳಕೆ ಮಾಡಲಾಗಿದೆ.

ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಬೆಂಗಳೂರು ಮೂಲದ ಅಮೋಘವರ್ಷ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್. ಸಂಪೂರ್ಣವಾಗಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+