ಕರ್ನಾಟಕ ಬಂದ್: ಮನವಿ ರೂಪದ ಎಚ್ಚರಿಕೆ ನೀಡಿದ ಯಡಿಯೂರಪ್ಪ!
ಬೆಂಗಳೂರು, ಡಿ. 04: ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ರಚನೆ ಮಾಡಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ನಾಳೆ (ಡಿ. 05) ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿದೆ. ಒಕ್ಕೂಟದ ಬಂದ್ ಕರೆಗೆ ಇದೀಗ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಬಂದ್ ಕುರಿತು ಹಗುರವಾಗಿ ಮಾತನಾಡಿದ್ದ ಬಿಜೆಪಿ ನಾಯಕರು ಇದೀಗ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಮನಗೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಂದ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನಾನು ಎಲ್ಲ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಅದರ ಅಗತ್ಯತೆಯೂ ಇಲ್ಲ. ಕನ್ನಡಕ್ಕೆ ಏನೇನೋ ಆದ್ಯತೆ ಕೊಡಬೇಕೋ, ಇನ್ನೂ ಹೆಚ್ಚಿನದಾಗಿ ಏನೇನು ಕೊಡಬೇಕೋ ಅದನ್ನು ಕೊಡಲು ನಾನು ಸಿದ್ದನಿದ್ದೇನೆ.

ಕನ್ನಡ ಪರ ಮುಖಂಡರು ಏನು ಹೇಳುತ್ತಾರೊ ಅದನ್ನು ನಾನು ಮಾಡಲು ಸಿದ್ಧನಿದ್ದೇನೆ. ದಯಮಾಡಿ ಬಂದ್‌ಗೆ ಎಲ್ಲಿಯೂ ಕೂಡ ಅವಕಾಶ ಇಲ್ಲ. ಯಾರು ಕೂಡ ಬಂದ್ ಮಾಡಬೇಡಿ. ದಯವಿಟ್ಟು ಇದಕ್ಕೆ ಎಲ್ಲರೂ ಸಹಕರಿಸಿಬೇಕು ಎಂದು ಮನವಿ ರೂಪದಲ್ಲಿ ಎಚ್ಚರಿಕೆ ನೀಡಿದ್ದಾರೆ.
Recommended Video
ಇಂದು ಬೆಳಗಾವಿಗೆ ಹೋಗುತ್ತಿದ್ದೇನೆ. ನಾಳೆ (ಡಿ. 05) ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಇದೆ. ಅದು ಮುಗಿಸಿ ನಾಳೆ ಸಂಜೆ ವಾಪಸ್ ಬರುತ್ತೇನೆ. ಅಲ್ಲಿಂದ ಬಂದ ನಂತರ ಉಳಿದ ವಿಷಯಗಳ ಬಗ್ಗೆ ತಿಳಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.












Click it and Unblock the Notifications