• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬದ ಮುನ್ನಾದಿನ ಬಿಎಸ್ವೈ ಸರಕಾರದ ಭವಿಷ್ಯ ನುಡಿದ ಸಿದ್ದರಾಮಯ್ಯ

|

ಬೆಂಗಳೂರು, ಸೆ 1: ಗೌರಿಗಣೇಶ ಹಬ್ಬದ ಒಂದು ದಿನದ ಮುನ್ನಾ, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ನೇತೃತ್ವದ ಸರಕಾರದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ಸಿದ್ದರಾಮಯ್ಯನವರ ಲೆಕ್ಕಾಚಾರದ ಪ್ರಕಾರ ಈ ಸರಕಾರ ಹೆಚ್ಚುದಿನ ಉಳಿಯುವುದಿಲ್ಲ. "ಚುನಾವಣೆಗೆ ನಾವು ಸಿದ್ದರಾಗಿದ್ದೇವೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸದಾ ಬಿಜೆಪಿ ಟೀಕಿಸುವ ಸಿದ್ದರಾಮಯ್ಯಗೆ ಶೆಟ್ಟರ್ ಎಸೆದ ಗುರುತರ ಚಾಲೆಂಜ್

ಅವರು ಮಾಡಿರುವ ಟ್ವೀಟ್ ಹೀಗಿದೆ, "ಉಪಚುನಾವಣೆಗೆ ತಯಾರಾಗಿದ್ದೇವೆ, ಮಧ್ಯಂತರ ಚುನಾವಣೆಗೂ ತಯಾರಾಗಿ ಎಂದು ನಿನ್ನೆ ಮಂಗಳೂರಿನ‌ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ".

" ಈ ಸರ್ಕಾರ ನೋಡಿದ್ರೆ ಹೆಚ್ಚು ದಿನ ನಿಲ್ಲುವ ಹಾಗೆ ಕಾಣುತ್ತಿಲ್ಲ, ಅದಕ್ಕೆ ಡಿಸೆಂಬರ್‌ಗೆ ಸಾರ್ವತ್ರಿಕ ಚುನಾವಣೆ ಬರುತ್ತೆ, ಸಿದ್ಧರಾಗಿ ಎಂದು ಹೇಳಿದ್ದು" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ, ಸರಕಾರದ ಭವಿಷ್ಯವನ್ನು ಹೇಳಿದ್ದಾರೆ.

" ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸಂತ್ರಸ್ತರಿಗೆ 10 ಸಾವಿರ ಪರಿಹಾರ ನೀಡುತ್ತಿದ್ದಾರೆ. ಅದು ಸಾಲದು, ಕನಿಷ್ಠ ಒಂದು ಲಕ್ಷ ಪರಿಹಾರ ನೀಡಬೇಕು. ಬರೀ ಭಾಷಣ ಮಾಡುವುದರಿಂದ ಸಂತ್ರಸ್ತರ ಕಷ್ಟ ದೂರವಾಗಲ್ಲ, ಸೂಕ್ತ ಪರಿಹಾರ ನೀಡಿ, ಪುನರ್ವಸತಿ ಕಲ್ಪಿಸಲಿ. ಇದು ಸರ್ಕಾರದ ಕರ್ತವ್ಯ" ಎಂದು ಸಿದ್ದರಾಮಯ್ಯ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ನನ್ನ ಬಾಯಲ್ಲೂ ಕೆಟ್ಟ ಪದಗಳು ಬರ್ತವೆ ಸಿದ್ದರಾಮಯ್ಯನವರೆ: ಈಶ್ವರಪ್ಪ

ದಕ್ಷಿಣಕನ್ನಡ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸಿದ್ದರಾಮಯ್ಯ, ಉಜಿರೆಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

English summary
Yediyurappa Government Will Not Survice, Election May Come This December: Former CM and CLP Leader Siddaramaiah Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X