ನಿಖಿಲ್ ನಿಶ್ಚಿತಾರ್ಥ; ಕೈ ಕುಲುಕಿದ ಹಾಲಿ, ಮಾಜಿ ಮುಖ್ಯಮಂತ್ರಿಗಳು

Recommended Video

      ನಿಖಿಲ್ ನಿಶ್ಚಿತಾರ್ಥಕ್ಕೆ ಬಂದ ಯಡಿಯೂರಪ್ಪ ಮಾಡಿದ್ದೇನು ಗೊತ್ತಾ..? | BSY | Nikhil Kumarswamy | Revathi | BJP

      ಬೆಂಗಳೂರು, ಫೆಬ್ರವರಿ 10 : ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥದಲ್ಲಿ ಮಾಜಿ ಮುಖ್ಯಮಂತ್ರಿಗಳ ಮುಖಾಮುಖಿಯಾಗಿದೆ. ರಾಜಕೀಯವೇ ಬೇರೆ, ಗೆಳೆತನವೇ ಬೇರೆ ಎಂಬುದು ಕರ್ನಾಟಕದಲ್ಲಿ ಹಲವು ಬಾರಿ ಸಾಬೀತಾಗಿದೆ.

      ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸೋಮವಾರ ನಿಖಿಲ್ ಕುಮಾರಸ್ವಾಮಿ, ರೇವತಿ ನಿಶ್ಚಿತಾರ್ಥ ನಡೆಯಿತು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ರೇವತಿಗೆ ನಿಖಿಲ್ ಕುಮಾರಸ್ವಾಮಿ ವಜ್ರದ ಉಂಗುರ ತೊಡಿಸಿದರು.

      ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭಾಶಯಗಳನ್ನು ಸಲ್ಲಿಸಿದರು. ಆಪ್ತರಿಗೆ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಆಹ್ವಾನ ನೀಡಿದ್ದರು.

      ರೇವತಿ ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಅಣ್ಣ ಮಂಜುನಾಥ್ ಪುತ್ರಿ. ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭಾಶಯ ಹೇಳಿದರು.

      ಹಾಲಿ, ಮಾಜಿ ಮುಖ್ಯಮಂತ್ರಿಗಳ ಮುಖಾಮುಖಿ

      ಹಾಲಿ, ಮಾಜಿ ಮುಖ್ಯಮಂತ್ರಿಗಳ ಮುಖಾಮುಖಿ

      ಎಚ್. ಡಿ. ಕುಮಾರಸ್ವಾಮಿ ಪುತ್ರನ ನಿಶ್ಚಿತಾರ್ಥದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಾಲ್ಗೊಂಡಿದ್ದರು. ನಿಖಿಲ್‌ಗೆ ಶುಭಾಶಯ ಸಲ್ಲಿಸಿದ ನಾಯಕರು ಕುಮಾರಸ್ವಾಮಿ ಕೈ ಕುಲುಕಿದರು. ನಿಶ್ಚಿತಾರ್ಥ ಹಾಲಿ, ಮಾಜಿ ಮುಖ್ಯಮಂತ್ರಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು.

      ಗಣ್ಯರಿಂದ ಶುಭಾಶಯ

      ಗಣ್ಯರಿಂದ ಶುಭಾಶಯ

      ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸೋಮವಾರ ಬೆಳಗ್ಗೆ 10.30 ರಿಂದ 12.30ರ ತನಕ ನಿಖಿಲ್ ಕುಮಾರಸ್ವಾಮಿ, ರೇವತಿ ನಿಶ್ಚಿತಾರ್ಥ ನಡೆಯಿತು. ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು.

      ದೇವೇಗೌಡರಿಂದ ಆಶೀರ್ವಾದ

      ದೇವೇಗೌಡರಿಂದ ಆಶೀರ್ವಾದ

      ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಪತ್ನಿ ಜೊತೆ ಬೆಳಗ್ಗೆಯೇ ಹೋಟೆಲ್‌ಗೆ ಆಗಮಿಸಿದ್ದರು. ಮೊಮ್ಮಗನ ನಿಶ್ಚಿತಾರ್ಥ ವೀಕ್ಷಣೆ ಮಾಡಿ ಆಶೀರ್ವಾದ ಮಾಡಿದರು. ನಿಖಿಲ್ ವಿವಾಹವಾಗುತ್ತಿರುವ ರೇವತಿ ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಅಣ್ಣ ಮಂಜುನಾಥ್ ಪುತ್ರಿ.

      ಏಪ್ರಿಲ್‌ನಲ್ಲಿ ವಿವಾಹ

      ಏಪ್ರಿಲ್‌ನಲ್ಲಿ ವಿವಾಹ

      ಎಚ್. ಡಿ. ದೇವೇಗೌಡ ಕುಟುಂಬ ಸದಸ್ಯರು, ಕುಟುಂಬದ ಆಪ್ತರ ಸಮ್ಮುಖದಲ್ಲಿ ರೇವತಿಗೆ ನಿಖಿಲ್ ಕುಮಾರಸ್ವಾಮಿ ವಜ್ರದ ಉಂಗುರ ತೊಡಿಸಿದರು. ಏಪ್ರಿಲ್‌ನಲ್ಲಿ ವಿವಾಹ ನಡೆಯಲಿದ್ದು, ಸ್ಥಳ ಇನ್ನೂ ನಿಗದಿಯಾಗಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+