ದೇಶದಲ್ಲಿ ಕಡಿಮೆ ದಿನ ಮುಖ್ಯಮಂತ್ರಿಯಾದವರ ಪಟ್ಟಿ!

ಬೆಂಗಳೂರು, ಮೇ 20 : ಕರ್ನಾಟಕದ 24ನೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಹುಮತ ಕೊರತೆಯ ಕಾರಣಕ್ಕೆ ಬಿಜೆಪಿ ಸರ್ಕಾರ ಮೂರೇ ದಿನದಲ್ಲಿ ಪತನಗೊಂಡಿದೆ.

ಮೇ 17ರ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರು ಮೇ 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೂರು ದಿನ ಮುಖ್ಯಮಂತ್ರಿಯಾಗಿದ್ದರು.

ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು 7 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆದರೆ, ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದವರು ಯಡಿಯೂರಪ್ಪ ಮಾತ್ರವಲ್ಲ. ದೇಶದಲ್ಲಿ ಹಲವು ನಾಯಕರು ಹೀಗಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ.

Yeddyurappa not the CM with shortest stint : Find out who it is

ಕಡಿಮೆ ಅವಧಿಯ ಮುಖ್ಯಮಂತ್ರಿಗಳ ಪಟ್ಟಿ

* ಜಗದಂಬಿಕಾ ಪಟೇಲ್ : 1988ರಲ್ಲಿ 1 ದಿನದ ಕಾಲ ಉತ್ತರ ಪ್ರದೇಶದ ಸಿಎಂ ಆಗಿದ್ದರು.

* ಬಿ.ಎಸ್.ಯಡಿಯೂರಪ್ಪ ಅವರು 2007ರಲ್ಲಿ 7 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು

* 1968ರಲ್ಲಿ ಸತೀಶ್ ಪ್ರಸಾದ್ ಅವರು ಬಿಹಾರ ಸಿಎಂ ಆಗಿ 7 ದಿನಗಳ ಕಾಲ ಕೆಲಸ ಮಾಡಿದ್ದರು

* 1998ರಲ್ಲಿ ಎಸ್‌.ಸಿ.ಮರಾಕ್ ಅವರು 13 ದಿನ ಮೇಘಾಲಯದ ಸಿಎಂ ಆಗಿದ್ದರು.

* ಜಾನಕಿ ರಾಮಚಂದ್ರನ್ ಅವರು 1988ರಲ್ಲಿ 23 ದಿನ ತಮಿಳುನಾಡಿನ ಸಿಎಂ ಆಗಿದ್ದರು.

* ಸಿ.ಎಚ್.ಮಹಮ್ಮದ್ ಕೋಯಾ ಅವರು 1975ರಲ್ಲಿ 45 ದಿನ ಕೇರಳದ ಸಿಎಂ ಆಗಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+