ನೀರು ಕುಡಿಯಲು ಹೋದ 3 ಬಾಲಕರು ಕೆರೆಗೆ ಬಿದ್ದು ಸಾವು
ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಇಳಿದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ಈ ಘಟನೆ ನಡೆದಿದೆ.
ಯಾದಗಿರಿ, ಏಪ್ರಿಲ್ 12: ಬಿರು ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಬಾಲಕರು ನೀರು ಪಾಲಾದ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ನಡೆದಿದೆ.
ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಬಾಲಕರು ಇಳಿದಿದ್ದರು. ಈ ವೇಳೆ ಬಾಲಕರು ನೀರು ಪಾಲಾಗಿದ್ದಾರೆ. ಮೃತ ಬಾಲಕರನ್ನು ಅಜಯ್ (12 ವರ್ಷ), ವಿಜಯ್ (11 ವರ್ಷ), ಗಣೇಶ್ (13 ವರ್ಷ) ಎಂದು ಗುರುತಿಸಲಾಗಿದೆ. [ಅತ್ತ ಬಿರುಬಿಸಿಲು, ಇತ್ತ ಬರಸಿಡಿಲು: ಮೂವರ ಸಾವು]

ತನ್ನ ಅಜ್ಜಿ ಯಮುನಾಬಾಯಿ ಜತೆ ಬಾಲಕರು ಹೊಲಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಾರಾಯಣಪುರ ಪೊಲೀಸರ ಭೇಟಿ ನೀಡಿ ಮಕ್ಕಳ ಶವ ಮೇಲಕ್ಕೆತ್ತಿದ್ದಾರೆ. [ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]












Click it and Unblock the Notifications