ಉಡುಪಿ : ಮಹಿಳೆ ಪ್ರಾಣ ತೆಗೆದ ಮೀನಿನ ಲಾರಿ

ಉಡುಪಿ, ಅಕ್ಟೋಬರ್ 03 : ಖಾಸಗಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಾಬುಕಳದಲ್ಲಿ ಶನಿವಾರ ನಡೆದಿದೆ. ಈ ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಹ್ಮಾವರದ ಮಾಬುಕಳ ಹೆದ್ದಾರಿಯಲ್ಲಿ ಶನಿವಾರ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಮೆರಿಟಾ ಡಿಸಿಲ್ವಾ (23) ಎಂದು ಗುರುತಿಸಲಾಗಿದೆ. ಮೀನು ಸಾಗಿಸುವ ಲಾರಿ ನಿಂತಿದ್ದ ಖಾಸಗಿ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. [ಕುಂದಾಪುರದಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ]

udupi

ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮೃತಪಟ್ಟ ಡಿಸಿಲ್ವಾ ಎಸ್ಎಮ್ಎಸ್ ಕಾಲೇಜಿನ ಉದ್ಯೋಗಿಯಾಗಿದ್ದರು.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿನಿಂದ ಇಳಿಯುತ್ತಿರಬೇಕಾದರೆ. ವೇಗವಾಗಿ ಬಂದ ಮೀನಿನ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

road accident

ಪ್ರಯಾಣಿಕರ ಬೋಟ್ ಜೆಟ್ಟಿ ಉದ್ಘಾಟನೆ : ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ 2.25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಯಾಣಿಕರ ಬೋಟ್ ಜೆಟ್ಟಿಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಿದರು.

ನಂತರ ಮಾತನಾಡಿದ ಆಸ್ಕರ್ ಫರ್ನಾಂಡೀಸ್ ಅವರು, 'ಸೈಂಟ್ ಮೇರಿಸ್‌ಗೆ ತೆರಳಬೇಕಾದ ಪ್ರವಾಸಿಗರು ಮಲ್ಪೆ ಬಂದರಿನ ಮೂಲಕ ಒಳ ಪ್ರವೇಶಿಬೇಕಾಗಿದ್ದು, ಈ ಜೆಟ್ಟಿಯಿಂದ ನೇರವಾಗಿ ಬೋಟ್ ಬಳಿ ಬರಬಹುದಾಗಿದ್ದು, ಈ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 25 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸಲಾಗುವುದು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+