Darshan Thoogudeepa: ದರ್ಶನ್‌ ನೋಡೋಕೆ ಜೈಲಿಗೆ ಬಂದ 'ರಚ್ಚು'! ಆದ್ರೆ ಅಲ್ಲಿ ಆಗಿದ್ದೆ ಬೇರೆ?

ಬೆಂಗಳೂರು, ಜುಲೈ 17: ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದಂದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್ ಇದೀಗ ಜೈಲಿನಲ್ಲಿ ವಿಲವಿಲ ಎನ್ನುವಂತಾಗಿದೆ. ನಟ ದರ್ಶನ್‌ ಜೈಲಿನಲ್ಲಿದ್ದು, ಪತ್ನಿ ಹಾಗೂ ಸ್ನೇಹಿತರ ಸೇರಿದಂತೆ ಸಾಕಷ್ಟು ಅಭಿಮಾನಿಗಳ ಬಳಕ ದರ್ಶನ್‌ ಅವರನ್ನ ಭೇಟಿಗೆ ಮುಂದಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ನಟ ದರ್ಶನ್ ನೋಡಲು ನಿತ್ಯ ಅಭಿಮಾನಿಗಳು ಬರ್ತಾನೆ ಇದ್ದಾರೆ. ಪ್ರತಿ ವಾರ ದರ್ಶನ್‌ ಅವರ ಪತ್ನಿ, ಪುತ್ರ ಸೇರಿದಂತೆ ದರ್ಶನ್‌ ಅವರ ಸಹೋದರ ದರ್ಶನ್‌ ಅವರನ್ನ ನೋಡಲು ಬರುತ್ತಿದ್ದು, ರಕ್ಷಿತಾ, ಪ್ರೇಮ್‌, ವಿನೋದ್‌ ಪ್ರಭಾಕರ್‌ ಸೇರಿದಂತೆ ಸಾಕಷ್ಟು ಸಿನಿಮಾ ನಟ, ನಟಿಯರು ದರ್ಶನ್‌ ಅವರ ಭೇಟಿಗೆ ಜೈಲಿಗೆ ಬರುತ್ತಿದ್ದಾರೆ. ಇಂದು(ಬುಧವಾರ) ಸಹ ಮಹಿಳಾ ಅಭಿಮಾನಿಗಳು ಆಗಮಿಸಿ ನಟ ದರ್ಶನ್ ನೋಡಲೇಬೇಕು ಎಂದು ಜೈಲಿನತ್ತ ಬಂದಿದ್ದಾರೆ.

Women Fans Came Near The Jail To See Darshan

ದರ್ಶನ್ ನೋಡಲು ಸ್ಯಾಂಡಲ್ವುಡ್ ನಟರು, ಸ್ನೇಹಿತರು, ನಟನ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಬರ್ತಾನೆ ಇರ್ತಾರೆ. ಕಳೆದ ಎರಡು ದಿನಗಳ ಹಿಂದೆ ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಆಗಮಿಸಿದ್ರು. ಇಬ್ಬರು ಮಹಿಳಾ ಅಭಿಮಾನಿಗಳು ಕೂಡ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದಿದ್ದಾರೆ.

ಸಾಕಷ್ಟು ಅಭಿಮಾನಿಗಳು ದೂರದ ಊರುಗಳಿಂದ ಬರುತ್ತಿದ್ದು, ದಾವಣಗೆರೆಯಿಂದ ಬಂದಿದ್ದ ಮಹಿಳಾ ಅಭಿಮಾನಿ ಕಾವ್ಯ ನಾನು ದರ್ಶನ್ ಅವರನ್ನು ನೋಡಲೆಂದು ಇಲ್ಲಿಗೆ ಬಂದಿರುವುದಾಗಿ ಹೇಳಿದ್ರು. ಕಾವ್ಯ ಎಂಬ ಯುವತಿ ಜೊತೆ ಆನೇಕಲ್ ತಾಲ್ಲೂಕಿನ ಚಂದಾಪುರದ ರಚ್ಚು ಎಂಬ ಯುವತಿ ಕೂಡ ಆಗಮಿಸಿದ್ದರು. ಆದರೆ, ಈ ಇಬ್ಬರು ಯುವತಿಯರಿಗೆ ನಟ ದರ್ಶನ್ ಭೇಟಿಗೆ ಜೈಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ನಟ ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆಗಿದ್ದಾರೆ. ಅಭಿಮಾನಿಗಳನ್ನು ಭೇಟಿಯಾಗುವುದಿಲ್ಲ. ಮನೆಯವರನ್ನು ಮಾತ್ರ ಭೇಟಿ ಮಾಡೋದಾಗಿ ದರ್ಶನ್ ಹೇಳಿದ್ದಾರೆ ಎಂದು ಪೊಲೀಸರು ಯುವತಿಯರಿಗೆ ತಿಳಿಸಿದ್ದಾರೆ.

ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್​ ತೂಗದೀಪ್ ಜೈಲಿಗೆ ಭೇಟಿ ನೀಡಿದ್ರು. ಈ ವೇಳೆ ಜಾಮೀನಿನ ವಿಚಾರವಾಗಿ ನಟ ದರ್ಶನ್ ‌ಜೊತೆ‌ ಪತ್ನಿ ಮತ್ತು ಸಹೋದರ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ, ಜಾಮೀನು ಪಡೆಯಲು ಇನ್ನು ಕೆಲ ದಿನಗಳು ಕಾಯಲೇಬೇಕು ಎಂದು ವಿಜಯಲಕ್ಷ್ಮಿ, ಪತಿ ದರ್ಶನ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಇದಕ್ಕೆ ದರ್ಶನ್​ ಸಹ ನೋಡೋಣ ಬಿಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+